ಯಲ್ಲಾಪುರ: ಯುವಕನೋರ್ವ ತನಗಿರುವ ಖಾಯಿಲೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಮ್ಮಾಡಿ ಕೋಣನಗುಂಡಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಸುಜಯ ನರಸಿಂಹ ದೇವಾಡಿಗ ಎಂದು ಗುರುತಿಸಲಾಗಿದೆ. ಈತ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದವನು ಔಷಧಿ ಮಾಡಿದರೂ ಗುಣಮುಖವಾಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ಹಿಂದಿರುವ ಅಡಿಕೆ ತೋಟಕ್ಕೆ ಸಿಂಪಡಿಸುವ ತುತ್ತ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

RELATED ARTICLES  ಇಂದು ಉ.ಕ ದಲ್ಲಿ 33 ಜನರಲ್ಲಿ ಕೊರೋನಾ ದೃಢ..! ಕುಮಟಾದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ..!

ವಿಷ ಸೇವಿಸಿದ್ದ ಈತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.