ಕಾರವಾರ : ಕಳೆದ ಅನೇಕ ತಿಂಗಳುಗಳಿಂದ ಭಯ ಹುಟ್ಟಿಸಿದ್ದ ಕೊರೋನಾ ಜಿಲ್ಲೆಯ ಜನರು ಸ್ವಲ್ಪ ನಿರಾಳವಾಗುವಂತೆ ಮಾಡಿದೆ ಎನಿಸುತ್ತದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 13 ಕರೊನಾ ಕೇಸ್ ದಾಖಲಾಗಿದ್ದು ಇತ್ತೀಚಿನ ಅತೀ ಕಡಿಮೆ ಕೇಸ್ ಎಂದೇ ಬಣ್ಣಿಸಲಾಗಿದೆ.
ಇದೇ ವೇಳೆ ಇಂದು ಜಿಲ್ಲೆಯಲ್ಲಿ ಇಂದು 16 ಮಂದಿ ಗುಣಮುಖರಾಗಿದ್ದಾರೆ. 361 ಸಕ್ರೀಯ ಪ್ರಕರಣಗಳಿವೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಭಟ್ಕಳ, ಶಿರಸಿ, ಯಲ್ಲಾಪುರದಲ್ಲಿ ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ.ಕಾರವಾರದಲ್ಲಿ ಮೂರು, ಜೋಯ್ಡಾದಲ್ಲಿ ಮೂರು ಕೇಸ್ ಕಂಡುಬಂದಿದೆ.
ಕುಮಟಾದಲ್ಲಿ ಐದು ಕೇಸ್
ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ.ಅಘನಾಶಿನಿಯ 78 ವರ್ಷದ ವೃದ್ಧ ಹಾಗೂ ಸುವರ್ಣಗದ್ದೆಯ 34 ವರ್ಷದ ಪುರುಷ, ಹೋನ್ಮಾವ್‌ದ 20 ವರ್ಷದ ಯುವತಿ, 39 ವರ್ಷದ ಮಹಿಳೆ, ಊರಕೇರಿಯ 40 ವರ್ಷದ ಮಹಿಳೆಗೆ ಕರೋನಾ ಪಾಸಿಟಿವ್ ಬಂದಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1777 ಕ್ಕೆ ಏರಿಕೆಯಾಗಿದೆ.
ಹೊನ್ನಾವರ ಹಾಗೂ ಅಂಕೋಲಾದಲ್ಲಿ 0 ಕೇಸ್
ತಾಲೂಕೊನ ಜನರು ಇಂದು ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿ ಇದಾಗಿದ್ದು ಹೊನ್ನಾವರ ತಾಲೂಕಿನಲ್ಲಿ ಇಂದು ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ. ಅಂಕೋಲಾ ತಾಲೂಕಿನಲ್ಲಿಯೂ ಯಾವುದೇ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ.