ಶಿರಸಿ: ಉತ್ತರ ಕನ್ನಡದಲ್ಲಿ ಮತ್ತೆ ಮತ್ತೆ ಗೋ ಕಳ್ಳತನದ ವರದಿಗಳು ಬರುತ್ತಿದ್ದವು ಆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಜಾಗ್ರತವಾಗಿ ಕಾರ್ಯ ಮಾಡುತ್ತಿದ್ದು ಗೋ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗುತ್ತಿದೆ.
ಶಿರಸಿ ನಗರದಲ್ಲಿ ಗೋ ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ವರದಿಯಾಗಿದೆ.
ಈ ಹಿಂದೆ ರಾತ್ರಿ ರಸ್ತೆ ಅಂಚಿನಲ್ಲಿ ಮಲಗಿಕೊಂಡಿದ್ದ ಜಾನುವಾರು ಅಪಹರಣಕ್ಕೆ ಪ್ರಯತ್ನಿಸುತ್ತಿದ್ದ ಬಗ್ಗೆ ವರದಿಯಾಗುತ್ತಿದು, ಈ ಬಗ್ಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೊಲೆರೊ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬನವಾಸಿ ಬಳಿಯ ಶಿರಕೊಪ್ಪ ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳು ಗಡಿಹಳ್ಳಿ ಬಳಿಯ ಬಿಳಿಗಿರಿಕೊಪ್ಪದವರಾಗಿದ್ದು, ವಾಹನ ಸಮೇತ ಅವರನ್ನು ಬಂಧಿಸಲಾಗಿದೆ.
ಈ ವೇಳೆ ವಾಹನದಲ್ಲಿ 7 ಜಾನುವಾರು ಇದ್ದು, ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.