ಗೋಕರ್ಣ : ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ಪರ್ವಕಾಲದಲ್ಲಿ  ದಿನಾಂಕ 09-11-2020 ಸೋಮವಾರ ಮುಂಜಾನೆ ಶಿವಗಂಗಾವಿವಾಹನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಸಂಪನ್ನಗೊಂಡಿತು .

ಇಂದು ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ತೆರಳಿತು .

(ಆ ಸಮಯದಲ್ಲಿ ಗಂಗಾವಳಿ ನದಿಯಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ.) ಭಕ್ತ ಜನರ  ಸಮ್ಮುಖದಲ್ಲಿ  ಗಂಗಾಮಾತಾ ದೇವಾಲಯದಲ್ಲಿ  ಶಿವ-ಗಂಗೆಯರ ಸಂವಾದ ಜರುಗಿತು . ನಂತರ  ಗಂಗಾಮಾತೆಯು ಮಹಾಬಲೇಶ್ವರನನ್ನು  ಮದುವೆಯಾಗುವುದಾಗಿ ಒಪ್ಪಿಗೆ ನೀಡಿದ ನಂತರ ನಿಶ್ಚಿತಾರ್ಥ ತಾಂಬೂಲೋತ್ಸವ ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸರಳವಾಗಿ ಈ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನವಾಯಿತು.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ.

ಉತ್ಸವವನ್ನು ಸಕಲ ಧಾರ್ಮಿಕ, ಪಾರಂಪರಿಕ ವಿಧಿ ವಿಧಾನಗಳನ್ನು ಅನುಸರಿಸಿಯೂ ಸರಳವಾಗಿ ಆಚರಿಸಲು ಶ್ರೀ ಮಹಾಬಲೇಶ್ವರ ದೇವಾಲಯದ ಉಪಾಧಿವಂತ ಮಂಡಳಿ ಮತ್ತು ಶ್ರೀ ಗಂಗಾಮಾತ ದೇವಾಲಯದ ಆಡಳಿತ ಮಂಡಳಿ ಹಾರ್ದಿಕ ಸಹಕಾರ ನೀಡಿದರು. ಅರ್ಚಕರಾದ ವೇ.ಮೂ. ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಭಟ್ಕಳದಲ್ಲಿ ಇಬ್ಬರಿಗೆ ಕರೋನಾ ಸೋಂಕು : ಉ.ಕ ದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ: ಜಿಲ್ಲಾಡಳಿತ ಮಾಹಿತಿ.

ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ  ‘ಶಿವಗಂಗಾ’ ವಿವಾಹ ಮಹೋತ್ಸವವು ದಿನಾಂಕ  14-11-2020 ಶನಿವಾರ   (ಆಶ್ವೀಜ ಬಹುಳ ಚತುರ್ದಶಿಯಂದು)  ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ನೆರವೇರುತ್ತದೆ.