ಬೆಳಗಾವಿ: ಕೆ.ಪಿ.ಸಿ.ಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ನಾವು ಮಹಾರಾಷ್ಟ್ರಕ್ಕೆ ಜೈ ಎಂದು ಹೇಳುತ್ತೇವೆ ಎನ್ನುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಜಿಲ್ಲೆಯ ಬಸರಿಕಟ್ಟೆ ಗ್ರಾಮದಲ್ಲಿ ಭಾಷಣದ ವೇಳೆ ಬೆಳಗಾವಿ ಮಹಾರಾಷ್ಟ್ರ ಪಾಲಾದರೆ ಸಂತೋಷದಿಂದ ಸ್ವಾಗತಿಸುತ್ತೇವೆ ಎಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಎಂಇಎಸ್ ಓಲೈಸುವ ಕೆಲಸವನ್ನು ಲಕ್ಷ್ಮೀ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿದ್ದುಕೊಂಡು ನಾಡ ದ್ರೋಹಿ ಕೆಲಸಕ್ಕೆ ಲಕ್ಷ್ಮೀ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ.
ವಿವಾದಿತ ಹೇಳಿಕೆ ನೀಡಿರುವ ಲಕ್ಷ್ಮೀ ಈ ಕುರಿತು ಯಾವುದೇ ವಿವರಣೆ ನೀಡದೆ ಇರುವುದು. ಅವರು ಎಂಇಎಸ್ ಪರವಾಗಿ, ಮಹಾರಾಷ್ಟ್ರ ಪರವಾಗಿದ್ದಾರಾ. ಕರ್ನಾಟಕದಲ್ಲಿಟ್ಟುಕೊಂಡು ಗಡಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರುವ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡೆ ಲಕ್ಷ್ಮೀ ನಾಡ ದ್ರೋಹ ಕೆಲಸಕ್ಕೆ ಮುಂದಾದರೆ ಸುಮ್ಮನಿರುವುದಿಲ್ಲ ಎಂದು ಟೀಕೆಗಳು ವ್ಯಕ್ತವಾಗಿದೆ.