ಹಳಿಯಾಳ :2016-17 ಸಾಲಿನ ಬಾಕಿಯಾದ ಪ್ರತಿ ಟನ್ ಕಬ್ಬಿಗೆ ರೂ.200 ರಂತೆ ಬಿಡುಗಡೆಗೊಳಿಸಬೇಕೆಂದು ಇಲ್ಲಿಯ ಕಬ್ಬು ಬೆಳೆಗಾರರ ಸಂಘದವರು ನಡೆಸಿದ ಹೊರಾಟಕ್ಕೆ ಜಯ ಸಿಕ್ಕಿದ್ದು ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಆಡಳಿತದವರು ಪ್ರತಿ ಟನ್ ಕಬ್ಬಿಗೆ ರೂ.200 ನೀಡುವುದಾಗಿ ಒಪ್ಪಿಕೊಂಡಿದ್ದಾರೆಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಕಬ್ಬು ಬೆಳೆಗಾರ ರೈತರಿಗೆ ಸ್ಪಂದಿಸಿದ ಕಾರ್ಖಾನೆಯ ಆಡಳಿತದವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದ ಅವರು ಕಬ್ಬು ಬೆಳೆಗಾರರು ಹಾಗು ಕಾರ್ಖಾನೆಯ ಆಡಳಿತ ಮಂಡಳಿ ಸೌಹಾರ್ದಯುತ ಸಂಬಂಧ ಬೆಳೆಸಿಕೊಂಡು ಹೋಗಬೇಕೆಂದು ಸೂಚಿಸಿದರು.
2015-16ನಬೇ ಸಾಲಿನ ಕಬ್ಬಿನ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರ ಸಂಘದವರ ನೇತೃತ್ವದಲ್ಲಿ ರೈತರು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದ್ದು ಬಾಕಿ ಹಣ ಬಿಡುಗಡೆ ಶಿಘ್ರದಲ್ಲಿಯೇ ರೈತರ ಖಾತೆಗೆ ಜಮಾ ಆಗಲಿದ್ದು ಇದರಿಂದ ಕಾರ್ಖಾನೆಯ ಆಡಳಿತಕ್ಕೆ ಸುಮಾರು ರೂ.12.5 ಕೋಟಿಗಳಷ್ಟು ಹೆಚ್ಚಿನ ಭಾರ ಬೀಳಲಿದೆ ಸುಮಾರು 10 ಸಾವಿರ ರೈತರಿಗೆ ಇದರ ಲಾಭ ದೊರಕಲಿದೆ ಎಂದು ಹಳಿಯಾಳ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಶಂಕರ ಕಾಜಗಾರ ಹೇಳಿದರು.