ಬೆಂಗಳೂರು : ರಾಜಕೀಯ ಎಂಟ್ರಿ ಹೊಸದಲ್ಲ. ಈ ಎಂಟ್ರಿಗೆ ದರ್ಶನ್ ಹೊಸ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ರಾಜ್ಯ ಕಾಂಗ್ರೆಸ್ ದರ್ಶನ್ ರಾಜಕೀಯ ಪ್ರವೇಶಕ್ಕೆ ವೇದಿಕೆಗೆ ಸಜ್ಜು ಮಾಡುವ ಕೆಲಸದಲ್ಲಿ ತೊಡಗಿದೆ.
ತಾರಾವರ್ಚಸ್ಸಿನ ರಾಜಕೀಯ ಅರಿತ ಕಾಂಗ್ರೆಸ್ ದರ್ಶನ್ ಅವರನ್ನು ಪಕ್ಷಕ್ಕೆ ಕರೆತರುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್’ನಲ್ಲಿಯೂ ಒಂದು ಸುತ್ತು ಚರ್ಚೆಯಾಗಿದೆ ಎನ್ನಲಾಗಿದೆ. ದರ್ಶನ್ ತಾಯಿ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಕೊಂಡಿದ್ದು, ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಕಮಲ್ ಹಾಸನ್, ರಜನಿ, ಉಪೇಂದ್ರ, ಚಿರಂಚೀವಿ, ಪವನ್ ಕಲ್ಯಾಣ್ ರಂತಹ ಸ್ಟಾರ್ ನಟರುಗಳ ರಾಜಕೀಯದತ್ತ ಬರುತ್ತಿರುವ ಈ ಹಂತದಲ್ಲಿಯೂ ಕರ್ನಾಟಕದಲ್ಲಿಯೂ ರಾಷ್ಟ್ರ ರಾಜಕೀಯ ಪಕ್ಷಗಳು ಕನ್ನಡದ ನಟರುಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದೆ. ಇದೇ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಹಾಗೂ ನಟ ಅಂಬರೀಶ್ ಈ ಪ್ರಯತ್ನದಲ್ಲಿ ತೊಡಗಿದ್ದಾರೆ.
ಮಂಡ್ಯದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್ ಅವರನ್ನು ಮೈಸೂರು, ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಸುವ ಚಿಂತನೆ ಆರಂಭವಾಗಿದೆ. ದರ್ಶನ್’ನನ್ನು ವಿಧಾನ ಸಭೆ ಸ್ಥಾನಕ್ಕೆ ಬದಲು ಲೋಕ ಸಭೆ ಸ್ಥಾನಕ್ಕೆ ಅದು ಪ್ರತಾಪ್ ಸಿಂಹ ಎದುರು ನಿಲ್ಲಿಸುವ ಹುನ್ನಾರ ಕಾಂಗ್ರೆಸ್’ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಜಕೀಯ ಬಗ್ಗೆ ನಿರಾಸಕ್ತಿ ತೋರಿಸಿದ್ದ ದರ್ಶನ್ ನಟ ಅಂಬರೀಶ್ ಜೊತೆ ಹೆಚ್ಚು ಆತ್ಮೀಯತೆ ಹೊಂದಿದ್ದಾರೆ. ಅಲ್ಲದೇ ಅವರ ಮಾತಿಗೆ ನಿರಾಕರಿಸುವುದಿಲ್ಲ ಎಂಬ ಭರವಸೆ ಮೇಲೆ ಅಂಬರೀಶ್ ಅವರನ್ನು ಮನವೊಲಿಸುವ ಕಾರ್ಯಕ್ಕೆ ಬಿಡಲಾಗಿದೆ.
ಈ ಹಿಂದೆ ಕೂಡ ಅಂಬರೀಶ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು ದರ್ಶನ್. ಕಾಂಗ್ರೆಸ್ ನಾಯಕರು ಅಂದು ಕೊಂಡಂತೆ ಆದರೆ ಬರುವ ವಿಧಾನ ಸಭೆ ಚುನಾವಣೆಗೂ ಮುಂಚೆಯೆ ಕಾಂಗ್ರೆಸ್ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.