ಸಿದ್ದಾಪುರ: ತಹಸಿಲ್ಧಾರ ಕಛೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಸೊರಬ ಹೆಚ್ಚೆ ಗ್ರಾಮದ ಉಷಾ ಸಾಗರ ಅಪಘಾತದಲ್ಲಿ ನಿಧನರಾಗಿದ್ದಾರೆ.

ಇಂದು ಆಲಳ್ಳಿ ಬಳಿ ನಡೆದ ಸ್ಕೂಟರ್,ಕಾರ್ ಮುಖಾಮುಖಿ ಡಿಕ್ಕಿಯಲ್ಲಿ ಉಷಾ ಸಾಗರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

RELATED ARTICLES  ಹೊಟ್ಟೆಯಲ್ಲಿ ಬೆಂಕಿ ಇದ್ದರೆ ಮಾತ್ರ ಸಾಧನೆ ಸಾಧ್ಯ: ಮುರಳೀಧರ ಪ್ರಭು

ಕಳೆದ ಕೆಲವು ವರ್ಷಗಳಿಂದ ಸಿದ್ಧಾಪುರದಲ್ಲಿ ಕಾರ್ಯನಿರ್ವಹಿಸುತಿದ್ದ ಇವರು ಸಾಗರದಲ್ಲಿ ವಾಸವಾಗಿದ್ದು ಸಿದ್ಧಾಪುರಕ್ಕೆ ಕಾರ್ಯನಿಮಿತ್ತ ಪ್ರವಾಸ ಮಾಡುತಿದ್ದರು.

ಇವರು ಇಂದು ಸಾಗರದಿಂದ ಸಿದ್ಧಾಪುರಕ್ಕೆ ಬರುತಿದ್ದಾಗ ಆಲಳ್ಳಿ ಬಳಿ ಸಂಭವಿಸಿದ ಮಾರುತಿ ಡಿಸಾಯರ್ ಕಾರ್ ಮತ್ತು ಸ್ಕೂಟರ್ ಗಳ ಮುಖಾಮುಖಿ ಡಿಕ್ಕಿಯೇ ಉಷಾ ಪ್ರಾಣಕ್ಕೆ ಕಂಟಕವಾಗಿದೆ.

RELATED ARTICLES  ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ವಿತರಣೆ