ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಪಲ್ಟಿಯಾಗಿ ಓರ್ವ ಪ್ರಯಾಣಿಕ ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ತಾಲೂಕಿನ ಹಡಿನಬಾಳದಲ್ಲಿ ಗುರುವಾರ ಬೆಳಿಗಿನ ಜಾವ ನಡೆದಿದೆ.
ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ, ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಕಾರು ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆಯ ಕೆಳಗೆ ಬಿದ್ದಿದೆ.
ಘಟನೆಯಲ್ಲಿ ಕಾರ್ ನಜ್ಜುಗುಜ್ಜಾಗಿದ್ದು ಕಾರ್ ನಲ್ಲಿದ್ದ ಪ್ರಯಾಣಿಕ ರಾಹುಲ್ ಎಂಬಾತ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಒರ್ವ ಯುವತಿ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕಾರಿನಲ್ಲಿ ಚಲಿಸುತ್ತಿದ್ದ ಉಳಿದವರಿಗೆ ಕೈ ಕಾಲು ಮುರಿತವಾಗಿ ತೀವ್ರ ಸ್ವರೂಪದ ಗಾಯಗಳಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಘಟನೆಯ ಬಗ್ಗೆ ತಿಳಿದಾಗ ಕೆಲ ಕಾಲ ಸ್ಥಳದಲ್ಲಿ ಜನ ಜಮಾಸಿದ್ದರು.