ಕಾರವಾರ : ಉತ್ತರ ಕನ್ನಡದಲ್ಲಿ ಇಂದು ಒಟ್ಟು 38 ಕೊರೋನಾ ಪ್ರಕರಣಗಳು ದಾಖಲಾಗಿದ್ದು 18 ಜನರು ಇಂದು ಬಿಡುಗಡೆಯಾಗಿ ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಕಾರವಾರ 18, ಅಂಕೋಲಾ 6, ಕುಮಟಾ 5, ಹೊನ್ನಾವರ 3,ಭಟ್ಕಳ 0, ಶಿರಸಿ 1, ಸಿದ್ದಾಪುರ 1, ಯಲ್ಲಾಪುರ 4, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಪ್ರಕರಣ ದಾಖಲಾಗಿದೆ.
ಕಾರವಾರ 1, ಅಂಕೋಲಾ 1, ಕುಮಟಾ 0, ಹೊನ್ನಾವರ 0, ಭಟ್ಕಳ 0, ಶಿರಸಿ 0, ಸಿದ್ದಾಪುರ 3, ಯಲ್ಲಾಪುರ 10, ಮುಂಡಗೋಡ 0, ಹಳಿಯಾಳ 3, ಜೋಯ್ಡಾ 0 ಜನರು ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.
ಒಟ್ಟು 13152 ಜನರು ಕೊರೋನಾ ಗೆದ್ದು ಬಂದರೆ, 1540 ಜನ ಕೊರೋನಾ ಕಹಿ ಅನುಭವಿಸಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ಸ್ಪಷ್ಟವಾಗಿ ತಿಳಿಸಿದೆ.
ಕುಮಟಾದ ಮಾಸೂರಿನ 48 ವರ್ಷದ ಪುರುಷ, ಹಿರೇಗುತ್ತಿಯ 65 ವರ್ಷದ ವೃದ್ಧೆ ಹಾಗೂ ಕುಮಟಾದ 75 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಅದಲ್ಲದೆ ಪಟ್ಟಣದ ಈರ್ವರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಅಂಕೋಲಾ ತಾಲೂಕಿನಲ್ಲಿ ಲೈನ್ ಲಿಸ್ಟ್ ಪ್ರಕಾರ ಹಾರವಾಡ, ಬಡಗೇರಿ, ಬೆಳಂಬಾರ ಮತ್ತಿತರೆಡೆ ಕೆಲ ಸೊಂಕಿನ ಪ್ರಕರಣಗಳು ಪತ್ತೆಯಾಗಿದೆ ಎನ್ನಲಾಗಿದೆ.
ಹೊನ್ನಾವರದಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ಹೊನ್ನಾವರ ತಾಲೂಕಿನಲ್ಲಿ ಅಷ್ಟಾಗಿ ಕರೊನಾ ಕೇಸ್ ಕಾಣಿಸಿಕೊಂಡಿರಲಿಲ್ಲ. ಆದರೆ, ಇಂದು 4 ಜನರಲ್ಲಿ ಸೋಂಕು ದೃಢಪಟ್ಟಿದೆ.
ಪಟ್ಟಣದ 45 ವರ್ಷದ ಪುರುಷ, ಗ್ರಾಮೀಣ ಭಾಗವಾದ ಅಳ್ಳಂಕಿಯ 59 ವರ್ಷದ ಪುರುಷ, ಬಳ್ಕೂರಿನ 22 ವರ್ಷದ ಯುವತಿ, ಅನಂತವಾಡಿಯ 54 ವರ್ಷದ ಪುರುಷ ಸೇರಿ ಇಂದು 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.