ಕುಂದಾಪುರ : ಅಂತರ್ ಜಿಲ್ಲಾ ಮನೆ, ದೇವಸ್ಥಾನಗಳಲ್ಲಿನ ಕಳವು ಪ್ರಕರಣಗಳ ಆರೋಪಿ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ, ಸುರತ್ಕಲ್, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ ಕಾರವಾರದಲ್ಲಿ ಮನೆ, ದೇವಸ್ಥಾನ ಮತ್ತು ದೈವಸ್ಥಾನ ಗಳಲ್ಲಿ ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಂದ್ರಾಳಿ ದುರ್ಗಾ ನಗರದ ಪ್ರಸ್ತುತ ಧಾರವಾಡ ಜಿಲ್ಲೆಯ ಜನತ್ ನಗರದ ರಾಜೇಶ ನಾಯ್ಕ ಯಾನೆ ರಾಜ ಯಾನೆ ರಾಜು ಪಾಮಡಿ (42) ಹಾಗೂ ಆತನ ಪತ್ನಿ ಪದ್ಮ ಪಾಮಡಿ (37) ಬಂಧಿತ ಆರೋಪಿಗಳು. ಇವರಿಂದ ಕುಂದಾಪುರ, ಉಡುಪಿ ನಗರ, ಮಣಿಪಾಲ, ಗಂಗೊಳ್ಳಿ, ಧಾರ ವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿರುವ ಒಟ್ಟು 202 ಗ್ರಾಂ ತೂಕದ ಚಿನ್ನ ಹಾಗೂ ಒಟ್ಟು 1.683ಕೆ.ಜಿ. ಬೆಳ್ಳಿ, ಎರಡು ದ್ವಿಚಕ್ರ ವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

RELATED ARTICLES  ಕಳ್ಳತನದ ವೇಳೆ ಅಡ್ಡಬಂದವರಿಗೆ ಮೆಣಸಿನ ಪುಡಿ ಹಾಕಿ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್..!

ಕುಂದಾಪುರ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟು ರಸ್ತೆಯಲ್ಲಿರುವ ಜಯ ರಾಜ್ ಶೆಟ್ಟಿ ಎಂಬವರು ಮನೆಗೆ ಬೀಗ ಹಾಕಿ ಪತ್ನಿ ಮನೆಗೆ ಹೋಗಿದ್ದಾಗ ಜು.6ರಂದು ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, 9,88,500ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES  ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೊರಟ ವಿದ್ಯಾರ್ಥಿನಿ ನಾಪತ್ತೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶದಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ ಹಾಗೂ ಧಾರಾವಾಡದ ಜುವೆಲ್ಲರಿ ಅಂಗಡಿ ಗಳಲ್ಲಿ ಮಾರಾಟ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ರಾಜೇಶ್ ಉಡುಪಿ ಇಂದ್ರಾಳಿಯ ನಿವಾಸಿಯಾಗಿದ್ದರೆ, ಈತನ ಪತ್ನಿ ಧಾರ ವಾಡದಳಾಗಿದ್ದಾಳೆ. ಈ ಹಿಂದೆ ಕಾಪು ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದ ರಾಜೇಶ್, ಕಳೆದ 2020ರ ಜುಲೈ ತಿಂಗಳಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದನು.