ಯಲ್ಲಾಪುರ: ವಯೋವೃದ್ದೆಯ ಮೇಲೆ ಮಂಗನ ಗುಂಪೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ಪಟ್ಟಣದ ಉದ್ಯಮನಗರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಸುಮಿತ್ರಾ ಪುಂಡಲೀಕ ಅಂಕೋಲೆಕರ (75) ಎಂಬುವವರು ತಮ್ಮ ಮನೆಯೊಳಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಕೆಂಪು ಮುಖದ ಮಂಗಳು ತಲೆಯನ್ನು ನಾಲ್ಕಾರು ಬಾರಿ ಕಚ್ಚಿ ಗಾಯಗೊಳಿಸಿವೆ. ತೀವೃ ರಕ್ತದ ಮಡುವಿನಲ್ಲಿ ಬಿದ್ದ ಆಕೆಯನ್ನು ಪಕ್ಕದ ಮನೆಯ ನಿವಾಸಿ ಆಶಾ ಕಾರ್ಯಕರ್ತೆ ಸಹನಾ ನಾಯ್ಕ ಎಂಬುವವರು ತಕ್ಷಣ ೧೦೮ ವಾಹನದ ಮೂಲಕ ಯಲ್ಲಾಪುರ ತಾಲೂಕಾ ಆಸ್ಪತ್ರಗೆ ದಾಖಲಿಸಿದ್ದಾರೆ.
ಯಲ್ಲಾಪುರ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಮಂಗಗಳ ಉಪಟಳ ಜಾಸ್ತಿಯಾಗುತ್ತಿದೆ. ಅರಣ್ಯ ಇಲಾಖೆಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES  ಪ್ರತಿಭೆಗಳನ್ನು ಗುರುತಿ ಪ್ರೋತ್ಸಾಹಿಸುವ ಕೆಲಸ ಸಮಾಜದ ಮೇಲಿದೆ- ನಾಗರಾಜ ನಾಯಕತೊರ್ಕೆ

ಪಟ್ಟಣ ವ್ಯಾಪ್ತಿಯಲ್ಲಿ ಮಂಗಗಳನ್ನು ನಿಯಂತ್ರಿಸದಿದ್ದರೇ ಪಟ್ಟಣ ಪಂಚಾಯತಿ ಹಾಗೂ ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಲಾಗುವುದು. ಆದಷ್ಟು ಶೀಘ್ರ ಮಂಗಗಳನ್ನು ಸ್ಥಳಾಂತರಿಸಬೇಕೆಂದು ರವೀಂದ್ರನಗರ ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ ಹೇಳಿದ್ದಾರೆ.

RELATED ARTICLES  ಹುಳ ಹಿಡಿದಿದೆ 300 ಕ್ವಿಂಟಲ್ ಬೇಳೆ-ಕಾಳು: ಹುಟ್ಟಿದೆ ನೂರಾರು ಅನುಮಾನ