ಹೊನ್ನಾವರ: ತಾಲೂಕಿನ ಕರ್ಕಿ ರೈಲ್ವೆ ಸ್ಟೇಶನ್ ಕ್ರಾಸ್ ಹತ್ತಿರ ಇರುವ  ಇಂಜಿನಿಯರಿಂಗ್ ವರ್ಕ್ಸನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ಕರ್ಕಿ ಲಕ್ಷ್ಮಣತಿರ್ಥ ನಿವಾಸಿ ಮಹಮ್ಮದ್ ಎ.ಆರ್ ಸದ್ಯಾನ್, ಜೆ.ಸಿ.ಬಿ ಗೆ ವೆಲ್ಡಿಂಗ್ ಮಾಡಿ ಗ್ರಿಂಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ ಮೃತ ಪಟ್ಟ ಬಗ್ಗೆ ವರದಿಯಾಗಿದೆ.

RELATED ARTICLES  ಸಮುದ್ರದ ಅಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನ ರಕ್ಷಣೆ

ಪಿ.ಎಸ್.ಐ ಶಶಿಕುಮಾರ್ ಸಿ.ಆರ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ್ದಾರೆ ಎಂದು ಇಂಜಿನಿಯರಿಂಗ್ ವರ್ಕ್ಸ ಮಾಲಿಕ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಮೃತ ಯುವಕನ ತಂದೆ ಅಬ್ದುಲ್ ರೆಹಮಾನ್ ಹಸನ್ ಸಾಬ್ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಬರಗದ್ದೆ ಸಹಕಾರಿ ಸಂಘ ಚುನಾವಣೆಯ ಫಲಿತಾಂಶ ಪ್ರಕಟ