ಕಾರವಾರ: ಉತ್ತರ ಕನ್ನಡ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘ ನಿ. ಕಾರವಾರ ಇದರಲ್ಲಿ ಇಂದು ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ರವಿ ಕೆ ಶೆಟ್ಟಿ ಕವಲಕ್ಕಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅದೇ ರೀತಿ ಉಪಾಧ್ಯಕ್ಷರಾಗಿ ಶ್ರೀಧರ್ ನಾಯ್ಕ ಬೇಲೇಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ 10/11/2020 ರಂದು ನಡೆದ ಚುನಾವಣೆಯಲ್ಲಿ ರವಿ ಕೆ ಶೆಟ್ಟಿ ಕವಲಕ್ಕಿಯವರ ಬೆಂಬಲಿಗರು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಇದೀಗ ಎಲ್ಲ ನಿರ್ದೇಶಕರ ಒಮ್ಮತದ ನಿರ್ಧಾರದಂತೆ ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರವಿ ಕೆ ಶೆಟ್ಟಿ ಕವಲಕ್ಕಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕವಲಕ್ಕಿಯ ರವಿ ಕೆ. ಶೆಟ್ಟಿಯವಯವರ ಮುಂದಾಳತ್ವದಲ್ಲಿ ಸ್ಪರ್ಧಿಸಿದ್ದ ಕುಮಟಾ ಸಿ ವರ್ಗದ ಹಿಂದುಳಿದ ವರ್ಗ (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೈಲೇಶ ಸುಬ್ರಾಯ ನಾಯ್ಕ, ಅಂಕೋಲಾ ಸಿ ವರ್ಗದ ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಧರ ದೇಮು ನಾಯ್ಕ, ಹೊನ್ನಾವರ ವರ್ಗದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರ ಅಣ್ಣಯ್ಯ ಹೆಗಡೆ, ಅಂಕೋಲಾ ಬ ವರ್ಗದ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಶವ ಜ್ಞಾನೇಶ್ವರ ನಾಯ್ಕ, ಸಿದ್ದಾಪುರ ಬ ವರ್ಗದ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮಕೃಷ್ಣ ರಾಮಪ್ಪಾ ಹೆಗಡೆ, ಶಿರಸಿ ಸಿ ವರ್ಗದ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುವರ್ಣಾ ಗುರುಪಾದ ಹೆಗಡೆ, ಕುಮಟಾ ಬ ವರ್ಗದ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ. ಜಿ. ಹೆಗಡೆ, ಹೊನ್ನಾವರ ಕಾಸರಗೋಡ ಬ ವರ್ಗದ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಿಲಕ ಜಟ್ಟಿ ಗೌಡ, ಕುಮಟಾ ಹೆಗಡೆ ಬ ವರ್ಗದ ಸಹಕಾರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭವಾನಿ ನಾಗು ಮುಕ್ರಿ, ಹೊನ್ನಾವರ ಸಿ ವರ್ಗದ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ರೇಣುಕಾ ರಾ ಹೆಗಡೆ, ಭಟ್ಕಳ ಸಿ ವರ್ಗದ ಪರಿಶಿಷ್ಟ ಜಾತಿ (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣ ಮಾಸ್ತಿ ಮೊಗೇರ, ಸಿ ವರ್ಗದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸುಬ್ರಾಯ ನಾರಾಯಣ ಸಿದ್ದಿ ಗೆಲುವು ಸಾಧಿಸಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.
ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಜನಮನ್ನಣೆ ಗಳಿಸಿರುವ ರವಿ ಕೆ. ಶೆಟ್ಟಿ ಕವಲಕ್ಕಿ ಹಾಗೂ ಶ್ರೀಧರ್ ನಾಯ್ಕ ಬೇಲೇಕೇರಿ ಅವರಿಗೆ ಅಭಿನಂದನೆಯ ಮಾಹಾಪೂರವೇ ಹರಿದುಬರುತ್ತಿದೆ. ತಮ್ಮ ಈ ಆಯ್ಕೆಗೆ ಕಾರಣರಾದ ಎಲ್ಲರಿಗೂ ರವಿ ಕೆ. ಶೆಟ್ಟಿ ಕವಲಕ್ಕಿ ಹಾಗೂ ಶ್ರೀಧರ್ ನಾಯ್ಕ ಬೇಲೇಕೇರಿ ಅವರು ಧನ್ಯವಾದ ಸಮರ್ಪಿಸಿದ್ದಾರೆ.