ದೀವಗಿ: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಕುಮಟಾ ಹಾಗೂ ದಯಾನಿಲಯ ಟ್ರಸ್ಟ್ ಮಿರ್ಜಾನ್ ವತಿಯಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ರಕ್ತ ಹೀನತೆಯ ತಪಾಸಣೆ ಹಾಗೂ ಕೊರೊನಾ ವೈರಸ್ ಕುರಿತಾಗಿ ಜಾಗೃತಿ ಕಾರ್ಯಕ್ರಮ.
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ವೈದ್ಯಾಧಿಕಾರಿಯಾದಂತಹ ಡಾ|| ಸನ್ಮತಿ ಹೆಗಡೆಯವರು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು.
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್‍ನ ಲ್ಯಾಬ್ ಟೆಕ್ನೀಶಿಯನ್ ಆದಂತಹ ಮಿಸ್. ಮಧುಶ್ರೀ ನಾಯ್ಕ ರವರು ನೆರೆದಿರುವ ಮಹಿಳೆಯರಿಗೆ ಉಚಿತವಾಗಿ ರಕ್ತ ಹೀನತೆಯ ತಪಾಸಣೆ ಮಾಡಿದರು.
ಕೊರೊನಾ ವೈರಸ್, ಶಾಶ್ವತ & ತಾತ್ಕಾಲಿಕ ಕುಟುಂಬ ಯೋಜನಾ ನಿಯಂತ್ರಣಾ ವಿಧಾನಗಳ ಕುರಿತಾಗಿ ಈ ಶಿಬಿರದ ಅಧ್ಯಕ್ಷತೆ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್ ಮಾಹಿತಿ ನೀಡಿದರು.

RELATED ARTICLES  ಸರಣಿ ಬಾಂಬ್ ಸ್ಫೋಟಕ್ಕೆ ಸಂಚು : 10 ಮಂದಿ ಶಂಕಿತ ಐಸಿಸ್ ಉಗ್ರರ ಬಂಧನ.

ದಯಾನಿಲಯ ಟ್ರಸ್ಟ್‍ನ ಮ್ಯಾನೇಜರ್ ಆದಂತಹ ಅರ್ಸಲಾ, ಸಿಸ್ಟರ್ ಆದ ಮೇರಿ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ನಾರ್ಥ ಕೆನರಾ ಬ್ರ್ಯಾಂಚ್‍ನ ಪ್ರೋಗ್ರಾಮ್ ಆಫೀಸರ್ ಆದ ಮಿಸ್ ಮಂಜುಳಾ ಗೌಡ, ಸಿಸ್ಟರ್ ಆದಂತಹ ಶ್ರೀಮತಿ ಕಮಲಾ ಪಟಗಾರ್,ಶ್ರೀಮತಿ ಭಾರತಿ ನಾಯಕ್ ಉಪಸ್ಥತರಿದ್ದರು.

RELATED ARTICLES  ಮರವಂತೆ ಹೆದ್ದಾರಿ ಕುಸಿತ..