ಕುಮಟಾ : ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಲುಕ್ಕೇರಿ ಬಳಿ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಕುಮಟಾ ಪೊಲೀಸ್ ತಂಡ ಕೋಳಿ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ.

RELATED ARTICLES  ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾದಲ್ಲಿ ಪೌರತ್ವ ತರಬೇತಿ ಶಿಬಿರ ಯಶಸ್ವಿ.

ಕಳೆದ ಹಲವಾರು ದಿನಗಳಿಂದ ಲುಕ್ಕೇರಿ ದೇವಸ್ಥಾನ ಬಳಿ ಬಯಲು ಜಾಗದಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇಂದು ಸಿ.ಪಿ.ಐ ಪರಮೇಶ್ವರ ಗುನಗಾ ಮತ್ತು ಪಿ.ಎಸ್.ಐ ಆನಂದಮೂರ್ತಿ ಅವರ ಮಾರ್ಗದರ್ಶನದ ಮೇರೆಗೆ ಕುಮಟಾ ಪೊಲೀಸರು ಅಪರಾಧ ವಿಭಾಗದ ಪಿ ಎಸ್ ಆಯ್ ಸುಧಾ ಅಘನಾಶಿಯವರ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಭಟ್ಕಳದಲ್ಲಿ ಮತ್ತೆ ಹೆಚ್ಚಿದೆ ಹುಚ್ಚು ನಾಯಿಯ ಕಾಟ: ಮಲಗಿದ್ದ ವ್ಯಕ್ತಿ ಮೇಲೆ ದಾಳಿ

ಬಂದಿತರಿಂದ 12 ಮೋಟಾರು ಸೈಕಲುಗಳು,2 ಕೋಳಿ ಹಾಗೂ 2200 ರೂ ನಗದು ಮತ್ತು ಕೋಳಿ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.