ಕುಮಟಾ : ಲಾಯನ್ಸ್ ಕ್ಲಬ್ ಕುಮಟಾ ವತಿಯಿಂದ ಹೊಲನಗದ್ದೆಯಲ್ಲಿ ಗ್ರಾಮೀಣ ಕೃಷಿ ಕಾರ್ಮಿಕ ಮಹಿಳೆಯರಲ್ಲಿ ಕೋವಿಡ್ 19 ಸುರಕ್ಷಾ ಅಭಿಯಾನದ ಅಂಗವಾಗಿ ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ವಿಶೇಷವಾಗಿ ಹಾಲಕ್ಕಿ ಸಮಾಜದ ಮಹಿಳೆಯರು ಬತ್ತದ ಕುತ್ತರಿ ಬಡಿಯುತ್ತಿರುವ ಸ್ಥಳಕ್ಕೆ ತೆರಳಿ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಲೈನ್ಸ್ ಅಧ್ಯಕ್ಷೆ ಶ್ರೀಮತಿ ವಿನಯಾ ಹೆಗಡೆಯವರು ಮಾತನಾಡಿ ಕರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಜಾಗ್ರತರಾಗಿರುವುದು ಮುಖ್ಯ ಎಂದು ತಿಳಿಹೇಳಿ ದರು. ಉಚಿತ ಮಾಸ್ಕ್ ವಿತರಿಸಿ ಮಾಸ್ಕ್ ಧರಿಸುವ ವಿಧಾನದ ಬಗ್ಗೆ ಮಹಿಳೆಯರಲ್ಲಿ ಅರಿವು ಮುಡಿಸಿದರು.
ಲಾಯನ್ಸ್ ಕ್ಲಬ್ ಈ ಪ್ರಯತ್ನ ಕೆಲಸ ನಿರತ ಗ್ರಾಮೀಣ ಮಹಿಳೆಯರಲ್ಲಿ ಹೊಸ ಹುರುಪು ತಂದಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್.ಎಸ್.ಹೆಗಡೆ, ಕೋಶಾಧಿಕಾರಿ ಎಂ.ಎನ್.ಹೆಗಡೆ, ಸಾಮಾಜಿಕ ಕಾರ್ಯಕರ್ತೆ ರೇಖಾ ಹೆಗಡೆ,ವಿವೇಕ ಹೆಗಡೆ ಉಪಸ್ಥಿತರಿದ್ದರು.