ಕುಮಟಾ: ತಾಲ್ಲೂಕಿನ ವಾರಿಧಿ ರಂಗ ಕೇಂದ್ರ (ರಿ.) ತಂಡದ ಅಭಿನಯ ರಂಗ ತರಬೇತಿ 2020 ರಂಗ ಶಿಬಿರವು ದಿನಾಂಕ 23.11.2020 ರ ಸೋಮವಾರ ಸಂಜೆ 6:00 ಗಂಟೆಗೆ ರೋಟರಿ ಸಭಾಭವನದ ಪಕ್ಕದ ಶಾಂತಿಕಾ ಡಾನ್ಸ್ ಶಾಲೆಯಲ್ಲಿ ಸಮಾರೋಪ ಸಮಾರಂಭಗೊಳ್ಳಲಿದೆ.

RELATED ARTICLES  ವಿಶ್ವೇಶ್ವರಯ್ಯನವರು ತಮ್ಮ ವ್ಯಕ್ತಿತ್ವದಿಂದ ವೃತ್ತಿಗೆ, ಈ ನಾಡಿಗೆ ಘನತೆಯನ್ನು ತಂದುಕೊಟ್ಟಿದ್ದಾರೆ : ಶಿವಾನಂದ ನಾಯ್ಕ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗ ಕರ್ಮಿಗಳಾದ ಶ್ರೀ ಜಿ. ಡಿ. ಭಟ್ಟರು ವಹಿಸಲಿದ್ದಾರೆ. ಈ ರಂಗ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಶ್ರೀ ವಿನೋದ್ ಭಂಡಾರಿ ನೀನಾಸಂ ಇವರು ನಿರ್ದೇಶನ ಮಾಡಿರುವ ಶ್ರೀ ರಾಮನಾಥ ರವರ ರಚನೆಯ “ಆಶ್ವಪರ್ವ” ಎಂಬ ನಾಟಕ ಪ್ರದರ್ಶನವಿರುತ್ತದೆ.

RELATED ARTICLES  ಮನೆಯ ಬಾಗಿಲಿಗೇ ಬಂತು ಚಿರತೆ.

ಸೀಮಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ. ಮತ್ತು ಕೋವಿಡ್-19 ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ವಾರಿಧಿ ರಂಗ ಕೇಂದ್ರದ ನಿರ್ದೇಶಕರಾದ ಶ್ರೀ ಶ್ರೀಕಾಂತ್ ಕುಮಟಾ ತಿಳಿಸಿರುತ್ತಾರೆ.