ಬಾಗಲಕೋಟ: ನಮ್ಮ ಕಾರ್ಯಕರ್ತರೇ ನಮಗೆ ರಿಯಲ್ ಸ್ಟಾರ್‌ಗಳು.ಯಾವ ಸ್ಟಾರ್‌ಗಳನ್ನಾದರೂ ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ. ದರ್ಶನ್ ಕಾಂಗ್ರೆಸ್ ಸೇರುವ ಮೂರ್ಖತನ ಮಾಡಲು ಹೋಗುವುದಿಲ್ಲ ಅನ್ನುವ ನಂಬಿಕೆ ನನಗಿದೆ ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ಬಾಗಲಕೋಟದಲ್ಲಿ ಮಾತನಾಡಿದ ಅವರು, ಮುಳುಗುತ್ತಿರುವ ಕಾಂಗ್ರೆಸ್ ಹಡಗು ಏರುವ ಕೆಲಸವನ್ನು ಯಾವ ಬುದ್ಧಿವಂತರೂ ಮಾಡುವುದಿಲ್ಲ. ದರ್ಶನ್ ಬುದ್ಧಿವಂತರೆಂಬ ನಂಬಿಕೆ ನನಗಿದೆ. ಹೀಗಾಗಿ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂಬ ಅಭಿಪ್ರಾಯ ನನಗಿದೆ ಎಂದು ಹೇಳಿದ್ದಾರೆ.
ರಮಾನಾಥ ರೈಗೆ ಗೃಹಖಾತೆ ಕೊಟ್ಟರೆ ಅದು ಈ ರಾಜ್ಯದ ಗ್ರಹಚಾರ. ಗ್ರಹಚಾರ ಕೆಟ್ಟಿದ್ದರೆ ಅವರಿಗೆ ಗೃಹಖಾತೆ ಕೊಡಲಿ. ನಾಲಗೆ ಮತ್ತು ತಲೆಯ ಮೇಲೆ ಹಿಡಿತ ಇಲ್ಲದವರಿಗೆ ಈ ಖಾತೆ ನೀಡುವುದು ಸರಿಯಲ್ಲ. ನಮಗೇನು ಭಯವಿಲ್ಲ, ಆದರೆ ರಾಜ್ಯದ ಜನರ ಪರಿಸ್ಥಿತಿ ಏನಾಗಬೇಡ. ರಾಜ್ಯ ಹಾಳಾಗಿ ಹೋಗುತ್ತದೆ ಎಂದರು.

RELATED ARTICLES  #Milkfestಕ್ಕೆ ರೆಕ್ಕೆ ಬಿಚ್ಚಿದೆ ಟ್ವಿಟ್ಟರ್ ಹಕ್ಕಿ