ಭಟ್ಕಳ : ಭಟ್ಕಳದ ಎಜುಕೇಶನ್ ಟ್ರಸ್ಟ್’ನ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರುಗಳಿಗೆ ಟಿಸಿಎಸ್ ಡಿಜಿಟಲ್ ಆನ್ಲೈನ್ ತರಬೇತಿಯ ಪ್ರಮಾಣಪತ್ರ ವಿತರಣಾ ಸಮಾರಂಭ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ ಮಾತನಾಡಿ “ನಮ್ಮ ಕಾಲೇಜಿನ ಉಪನ್ಯಾಸಕರು ಸ್ವಯಂ ಆಸಕ್ತಿಯಿಂದ ಡಿಜಿಟಲ್ ತರಬೇತಿಯನ್ನು ಪಡೆಯುವ ಮೂಲಕ ಕೌಶಲ್ಯವನ್ನು ವೃದ್ಧಿಸಿಕೊಂಡಿರುವುದು ಪ್ರಶಂಸನೀಯ, ಇದು ನಮ್ಮ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್’ನ ಅಧ್ಯಕ್ಷರಾದ ಡಾ. ಸುರೇಶ್ ನಾಯಕರವರು “ಇಪ್ಪತೊಂದನೇ ಶತಮಾನ ತಂತ್ರಜ್ಞಾನದ ಯುಗವಾಗಿದ್ದು, ತಾಂತ್ರಿಕ ಕೌಶಲ್ಯವು ಬೋಧನೆ ಪರಿಣಾಮಕಾರಿಯಾಗಲು ಸಹಕಾರಿ, ಕಾಲೇಜಿನ ಉಪನ್ಯಾಸಕರ ತರಬೇತಿಹೊಂದಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು”
ಟಿಸಿಎಸ್ ಡಿಜಿಟಲ್ ಆನ್ಲೈನ್ ತರಬೇತಿಯ ಕುರಿತು ಉಪನ್ಯಾಸಕರು ಡಿಜಿಟಲ್ ಪ್ರೆಸೆಂಟೇಷನ್ ನೀಡಿದರು.ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಉಪನ್ಯಾಸಕ ಓಂಕಾರ ಮರಬಳ್ಳಿ ಸ್ವಾಗತಿಸಿದರು. ಉಪನ್ಯಾಸಕ ವಿಘ್ನೇಶ ಪ್ರಭು ವಂದಿಸಿದರು ಹಾಗೂ ನರಸಿಂಹ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಡಿಜಿಟಲ್ ರೂಪದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು.