ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿನ ಕಾರಣಕ್ಕೆ ರಾಜ್ಯದಲ್ಲಿ ಇನ್ನೂ ಶಾಲೆ ಆರಂಭ ಆಗಿಲ್ಲ. ಶಾಲಾ-ಕಾಲೇಜು ಓಪನ್ ಮಾಡುವ ಬಗ್ಗೆ ಮೂರ್ನಾಲ್ಕು ತಿಂಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕೆಲವರು ತರಗತಿ ಆರಂಭ ಆಗಬೇಕು. ಎಂದರೆ ಬಹುತೇಕರು ಮಕ್ಕಳ ಶಿಕ್ಷಣಕ್ಕಿಂತ ಪ್ರಾಣ ಮುಖ್ಯ, ಒಂದು ವರ್ಷ ಶಾಲೆ. ತೆರೆಯದಿದ್ದರೆ ಏನೂ ಆಗಲ್ಲ ಎನ್ನುತ್ತಲೇ ಬಂದಿದ್ದಾರೆ.

ಈ ಕುರಿತು ರಾಜ್ಯದಲ್ಲಿ ಇದೀಗ ಎರಡು ನಿರ್ದಿಷ್ಟ ಅಭಿಪ್ರಾಯ ಮೂಡಿದೆ. ಶಾಲೆ ಆರಂಭ ಮಾಡಬೇಕು ಅಂತ ಒಂದು ವಾದ ಇದೆ, ಕರೊನಾ ಇರೋದ್ದರಿಂದ ಬೇಡ ಅಂತ ಮತ್ತೊಂದು ವಾದ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪೋಷಕರು ಮತ್ತು ತಜ್ಞರ ಜತೆ ಅಭಿಪ್ರಾಯ ಸಂಗ್ರಹ ಮಾಡಿತ್ತು. ಸೋಮವಾರ ಕೂಡ ಸಿಎಂ ನೇತೃತ್ವದಲ್ಲಿ ಚರ್ಚೆ ಆಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ವರ್ಷ ಶಾಲೆ ಆರಂಭಿಸಲ್ಲ ಎಂದಿದ್ದಾರೆ.

ಶಾಲೆ ಆರಂಭದ ಕುರಿತು ಡಿಸೆಂಬರ್ ಮೂರನೇ ವಾರದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ಮಾಡ್ತೀವಿ ಎಂದ ಸಚಿವ ಸುರೇಶ್ ಕುಮಾರ್, ‘ಸಂವೇದ’ ಮೂಲಕ ಹತ್ತನೇ ತರಗತಿ ಪರೀಕ್ಷೆ ಪಾಠ ಪೂರ್ಣಗೊಳ್ಳುತ್ತೆ. ಜೀರೋ ಇಯರ್ ಅಂತ ಘೋಷಣೆ ಮಾಡಲ್ಲ. ಕೊನೆಯ ವರ್ಷ ಕೂಡ 1-9 ತರಗತಿವರೆಗೂ ಯಾವುದೇ ಪರೀಕ್ಷೆ ಇಲ್ಲದೆ ಪಾಸ್ ಮಾಡಿದ್ವಿ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಂಖ್ಯೆ 9,59,566 ఇదే. 5,70,126 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಯಲ್ಲಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಘೋಷಣೆ ಮಾಡ್ತೀವಿ ಎಂದು ಸುರೇಶ್ ಕುಮಾರ್ ಹೇಳಿದರು.

RELATED ARTICLES  ಮತ್ತೆ ಅರ್ಧ ಶತಕದ ಗಡಿ ದಾಟಿದ ಉತ್ತರ ಕನ್ನಡದ ಕೊರೋನಾ ಪಾಸಿಟೀವ್ ಸಂಖ್ಯೆ

ಹೈದ್ರಾಬಾದ್‌ನಿಂದಲೇ ವಿಡಿಯೋ ಮೂಲಕ ಸಭೆಯಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಡಿಸೆಂಬರ್‌ನಲ್ಲಿ ಚಳಿಗಾಲ ಇರುವುದರಿಂದ, ಚಳಿ ಹೆಚ್ಚಾಗುವ ಸಂದರ್ಭ ಇರುವುದರಿಂದ, ಎರಡನೇ ಕೋವಿಡ್ ಅಲೆ ಮುನ್ಸೂಚನೆ ಇರುವ ಕಾರಣ ಡಿಸೆಂಬರ್‌ನಲ್ಲಿ ಶಾಲಾ- ಕಾಲೇಜು ಬೇಡ ಎಂದಿದ್ದಾಗಿ ಸುರೇಶ್ ಕುಮಾರ್ ವಿವರಿಸಿದರು.

ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಆದರೂ ಮಕ್ಕಳ ಜೀವ ಉಳಿಸುವುದು ಮುಖ್ಯ. ಹಾಗಾಗಿ ಶಾಲೆ ಆರಂಭ ಮಾಡದಿರುವ ನಿರ್ಧಾರಕ್ಕೆ ಬಂದೆವು. ಏನೇ ನಿರ್ಧಾರ ತೆಗೆದುಕೊಂಡರೂ ಮಕ್ಕಳ ಹಿತವೇ ಮುಖ್ಯ. ಯಾವುದೇ ಒತ್ತಡಕ್ಕೂ ಶಾಲೆ ತೆರೆಯಲ್ಲ. ಡಿಸೆಂಬರ್ ಮೂರನೇ ವಾರದ ಸನ್ನಿವೇಶ ಅವಲೋಕಿಸಿ ತೀರ್ಮಾನ ಕೈಗೊಳ್ಳುತ್ತೇವೆ.

RELATED ARTICLES  ಕುಮಟಾ ವೈಭವಕ್ಕೆ ದಿನಗಣನೆ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೂರ್ಣ ವಿವರ ನೀಡಿದ ಸಮಿತಿ ಸದಸ್ಯರು.

ಎರಡನೇ ಅವಧಿಯ ಶುಲ್ಕ ಪಡೆಯುವ ಬಗ್ಗೆ ಖಾಸಗಿ ಶಾಲೆಯವರಿಂದ ಬೇಡಿಕೆ ಬಂದಿದೆ. ಯಾವ ರೀತಿ ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ತೀರ್ಮಾನಿಸಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ವಿವರಿಸಿದರು. ಒಂಬತ್ತು, ಹತ್ತು ಮತ್ತು ಪಿಯುಸಿ ತರಗತಿ ಆರಂಭದ ಬಗ್ಗೆಯಷ್ಟೇ ಸದ್ಯದ ಚರ್ಚೆ ಎಂದರು.

ಶುಲ್ಕ ಕಟ್ಟಿಲ್ಲ ಎಂದು ಖಾಸಗಿ ಶಾಲೆಗಳು ಮುಂದಿನ ವರ್ಷಕ್ಕೆ ಮಕ್ಕಳನ್ನು ಪಾಸ್ ಮಾಡಲ್ಲ ಎಂದು ಹೇಳಲು ಬರಲ್ಲ. ಸರ್ಕಾರ ಈ ಬಗ್ಗೆ ಒಂದು ನಿರ್ಧಾರ ಪ್ರಕಟಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಚಿವರು ಸುದ್ದಿಗೋಷ್ಠಿ ನಡೆಸುವ ಮುನ್ನವೇ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ, ಡಿಸೆಂಬರ್‌ವರೆಗೂ ಶಾಲಾ ಕಾಲೇಜು ತೆರೆಯಲ್ಲ. ಡಿಸೆಂಬರ್ ಕೊನೆಯಲ್ಲಿ ಮತ್ತೊಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದರು.