ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಮತ್ತೆ ಗೋ ಕಳ್ಳತನ ಪ್ರಕರಣ ಸದ್ದು ಮಾಡುತ್ತಿದೆ. ಉತ್ತರ ಕನ್ನಡದ ಹಲವೆಡೆ ಗೋ ಕಳ್ಳತನ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವುದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಹೊನ್ನಾವರ ತಾಲೂಕಿನ ಕೆರವಳ್ಳಿಯ ಸುಬ್ರಹ್ಮಣ್ಯ ಗೌಡ ಎನ್ನುವವರ ಮನೆಯ ಕೊಟ್ಟಿಗೆಯಲ್ಲಿರುವ 3 ಗೋವನ್ನು ಗೋ ಕಳ್ಳರು ತಮ್ಮ ಎಮ್ 19 ಅ 6228 ವಾಹನದಲ್ಲಿ ಕದ್ದೊಯ್ಯುವ ಪ್ರಯತ್ನ ಮಾಡಿದ ಘಟನೆ ವರದಿಯಾಗಿದೆ.

RELATED ARTICLES  ಬಿಡುವು ಕೊಟ್ಟ ಮಳೆರಾಯ : ಬಿಸಿಲು ಕಂಡ ಕುಮಟಾ : ಮತ್ತೆ ಮಳೆಯ ಮುನ್ನೆಚ್ಚರಿಕೆ.

ನಿನ್ನೆ ರಾತ್ರಿ 1 ಗಂಟೆಯ ವೇಳೆಗೆ ಸಂದರ್ಭದಲ್ಲಿ ಗೋವುಗಳು ಕೂಗಿಕೊಂಡಿದ್ದರಿಂದ ಎಚ್ಚರಗೊಂಡ ಸುಬ್ರಹ್ಮಣ್ಯ ಗೌಡರು ಹೊರಗೆ ಬಂದು ನೋಡುವುದರ ಒಳಗೆ ಕಳ್ಳರು ಪರಾರಿಯಾಗಲು ಯತ್ನಿಸಿದರು. ಇದನ್ನು ತಡೆಯಲು ಬಂದ ಬಾಲು ಗೌಡ ದಿಬ್ಬಣಗಲ್ ರವರ ಮೇಲೆ ಮಾರಕಾಸ್ತ್ರ ಹಲ್ಲೆ ನಡೆಸುತ್ತಿರುವ ವೇಳೆ ಸ್ಥಳೀಯ ಸಾರ್ವಜನಿಕರೆಲ್ಲ ಸೇರಿ ಗೋ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

RELATED ARTICLES  ಅರಬೈಲ್ ನಲ್ಲಿ ಲಾರಿ ಹಾಗೂ ಕಾರ್ ನಡುವೆ ಅಪಘಾತ‌: ಓರ್ವಸ ದುರ್ಮರಣ

ಹಲ್ಲೆಯಿಂದ ಬಾಲು ಗೌಡ ದಿಬ್ಬಣಗಲ್ ಅವರ ಬಲಗೈಗೆ ತೀವ್ರ ತರದ ಪೆಟ್ಟಾಗಿದ್ದು. ಗೋ ಕಳ್ಳರು ಭಟ್ಕಳದ ಇರ್ಪಾನ್ ಭಾಶಾ ಖಾನ್. ತಿಮ್ಮಪ್ಪ ನಾಯ್ಕ ನೆಲ್ಲಿಗದ್ದೆ, ಉಮೇಶ್ ನಾಯ್ಕ ಜಲವಳಕರ್ಕಿ, ಮತೀನ್ ಹೆರಂಗಡಿ ಎಂದು ತಿಳಿದು ಬಂದಿದೆ. ಪೊಲೀಸ್ ತನಿಖೆಯ ನಂತರ ಪೂರ್ಣ ಮಾಹಿತಿ ಹೊರಬರಬೇಕಿದೆ.