ಕಾರವಾರ : ಉತ್ತರ ಕನ್ನಡದಲ್ಲಿ ಇಂದು ಕೊರೋನಾ ಕಡಿಮೆ ಪ್ರಕರಣಗಳು ದಾಖಲಾಗುವ ಮೂಲಕ ಜನರಲ್ಲಿ ಆಶಾದಾಯಕ ಮನಸ್ಥಿತಿ ಮೂಡಿಸಿದೆ. ಇಂದು ಒಟ್ಟು 16 ಕೊರೋನಾ ಪ್ರಕರಣಗಳು ದಾಖಲಾಗಿದ್ದು 41 ಜನರು ಇಂದು ಕೊರೋನಾ ಗೆದ್ದು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಕಾರವಾರ 04, ಅಂಕೋಲಾ 0, ಕುಮಟಾ 3, ಹೊನ್ನಾವರ 1,ಭಟ್ಕಳ 1, ಶಿರಸಿ 3, ಸಿದ್ದಾಪುರ 0, ಯಲ್ಲಾಪುರ 2, ಮುಂಡಗೋಡ 0, ಹಳಿಯಾಳ 2, ಜೋಯ್ಡಾ 0 ಪ್ರಕರಣ ಅಂದರೆ ಒಟ್ಟೂ 16 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 142 ಆಕ್ಟೀವ್ ಪ್ರಕರಣಗಳಿವೆ.
ಕಾರವಾರ 8, ಅಂಕೋಲಾ 3, ಕುಮಟಾ 6, ಹೊನ್ನಾವರ 2 , ಭಟ್ಕಳ 3, ಶಿರಸಿ 2, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 17, ಹಳಿಯಾಳ 0, ಜೋಯ್ಡಾ 0 ಜನರು ಒಟ್ಟೂ 41 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.
ಒಟ್ಟು 13347 ಜನರು ಕೊರೋನಾ ಗೆದ್ದು ಬಂದರೆ, 13716 ಜನ ಕೊರೋನಾ ಕಹಿ ಅನುಭವಿಸಿದ್ದಾರೆ.