ಶಿರಸಿ: ತಾಲೂಕಿನ ಹಲಸನಹಳ್ಳಿ ಮೂಲದ ಡಾ. ಸುಬ್ರಾಯ ಹೆಗಡೆ ಅವರಿಗೆ Global Visionary Award ದೊರೆತಿದೆ. ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ನೀಡುವ ಈ ಪ್ರಶಸ್ತಿಯನ್ನು ಅಹಮದಾಬಾದಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಸುಬ್ರಾಯ ಹೆಗಡೆಯವರಿಗೆ ಜನ್ ವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ನೆರೇನ್ ಷಾ ಪ್ರಶಸ್ತಿ ಪ್ರಧಾನ ಮಾಡಿದರು.
ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಆಯ್ಕೆ ಈ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಾರೆ. ಉದಯಪುರ ಸಿಮೆಂಟ್ ವರ್ಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಡಾ, ಸುಬ್ರಾಯ ಹೆಗಡೆ ಅವರು ದಾಲ್ಮಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್, ರಾಜಶ್ರೀ ಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಸಿಮೆಂಟ್, ಲಘಾರ್ಜ್ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ದೇಶ, ವಿದೇಶಗಳಲ್ಲಿ ಸಿಮೆಂಟ್ ಪ್ಲಾಂಟ್ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ.
ಇವರು 112 ಸಂಶೋಧನಾ ಪ್ರಬಂಧ ರಚಿಸಿದ್ದಾರೆ. ತಮ್ಮದೇ ಹೆಸರಿನಲ್ಲಿ 6 ಪೇಟೆಂಟ್ ಹೊಂದಿದ್ದಾರೆ. 2019ರಲ್ಲಿ ಜಾಗತಿಕ ಮಟ್ಟದ ಸಿಮೆಂಟ್ ನಿಯತಕಾಲಿಕೆಗಳಾದ ವರ್ಲ್ಡ್
ಸಿಮೆಂಟ್, ಇಂಟರ್ ನ್ಯಾಷನಲ್ ಸಿಮೆಂಟ್ ರಿವ್ಯೂ, ಕಾಂಕ್ರೀಟ್ ರಿಸರ್ಚ್ ಜರ್ನಲ್‌ಗಳಲ್ಲಿ ಏಕಕಾಲದಲ್ಲಿ ಡೊಮೇನ್ ಎಕ್ಸ್‌ಪರ್ಟ್ ಆಗಿ ಆಯ್ಕೆ ಆದ ಮೊಟ್ಟ ಮೊದಲ ಭಾರತೀಯ
ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ಸುಬ್ರಾಯ ಹೆಗಡೆಯವರ ಬಗ್ಗೆ.
2020ರ ವಿಜನರಿ(visionary Award) ಅವಾರ್ಡ್ ಪಡೆದ ಡಾ. ಸುಬ್ರಾಯ ಹೆಗಡೆ ಇವರು ನಮ್ಮಲ್ಲೊಬ್ಬರು, ಉನ್ನತ ವ್ಯಕ್ತಿತ್ವ ಹೊಂದಿದ ಸಾಧಕರು. ಸಿರ್ಸಿ ತಾಲೂಕಿನ ಹಲಸ್ನಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ 1963 ಮಾರ್ಚ 26 ರಂದು ಮಧ್ಯಮ ವರ್ಗದ ತುಂಬು ಕುಟುಂಬದಲ್ಲಿ ಜನಿಸಿದರು.ತಂದೆ ಬಾಲಚಂದ್ರ ತಾಯಿ ಇಂದಿರಾ ರವರ ಏಕಮಾತ್ರ ಪುತ್ರ. ಪ್ರಾಥಮಿಕ ಶಿಕ್ಷಣ ವನ್ನು ಹಲಸ್ನಳ್ಳಿ ಯಲ್ಲೂ, ಪ್ರೌಢ ಶಿಕ್ಷಣ ವನ್ನು ಗೋಳಿಯಲ್ಲೂ ಕನ್ನಡ ಮಾಧ್ಯಮ ದಲ್ಲೇ ಕಲಿತವರು. ಸಿರ್ಸಿ ಕಾಲೇಜಿನಲ್ಲಿ ಬಿ.ಎಸ್ಸಿ (Bsc) ಮುಗಿಸಿ ಧಾರವಾಡ್ ಯುನಿವರ್ಸಿಟಿ ಯಲ್ಲಿ ಎಮ್ಮೆಸ್ಸಿ (MSc) ಮುಗಿಸಿದರು. ನಂತರ ಧಾರವಾಡದಲ್ಲೇ ಡಾ|| ಪುರಾಣಿಕ್ ಅವರ ಮಾರ್ಗದರ್ಶನ ದಲ್ಲಿ ಪಿ.ಎಚ್.ಡಿ(PHD) ಮಾಡಲು ಪ್ರಾರಂಬಿಸಿದರು. ಅಲ್ಲಿಂದಲೇ ಅವರ ಸಾಧನೆ ಪ್ರಾರಂಭ. ಕೇವಲ ಎರಡು ವರ್ಷಗಳಲ್ಲಿ ಪಿ.ಎಚ್.ಡಿ ಮುಗಿಸಿದ ದಾಖಲೆ ಇವರದಾಯಿತು. ಇದಾದಮೇಲೆ ಎರಡು ವರ್ಷ (1988 -1990) ಸಿರ್ಸಿ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿ ಅಲ್ಲಿಯೂ ಒಳ್ಳೆ ಯ ಹೆಸರು ಗಳಿಸಿದರು.1990 ರಲ್ಲಿ ಸೇಲಂ ದ ದಾಲ್ಮಿಯಾ ರಿಸರ್ಚ ಇನಸ್ಟಿಟ್ಯೂಟ್ ನಲ್ಲಿ ಸೈನ್ಸಿಸ್ಟ್ ಆಗಿ ಕೆಲಸಕ್ಕೆ ಸೇರಿದರು.ಅಲ್ಲಿ ಸತತವಾಗಿ 3 ವರ್ಷ ಪ್ರಮೋಶನ್ ಗಿಟ್ಟಿಸಿದರು.ಅದೂ ಕೂಡ ದಾಲ್ಮಿಯಾ ಕಂಪನಿಯಲ್ಲಿ ಒಂದು ರೆಕಾರ್ಡ ಆಯಿತು, ಪ್ರಶಸ್ತಿಯೂ ಪ್ರದಾನ ವಾಯಿತು. ತದ ನಂತರ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಒಂದೇ ವರ್ಷದಲ್ಲಿಮೆನೆಜರ್ ಆಗಿ ಪ್ರಮೋಶನ್ ಆಯಿತು.(ಅಪರೂಪದ ಬೆಳವಣಿಗೆ). 2001ರಲ್ಲಿ ಟಾಪ್ ಲೇವಲ್ ಮೆನೇಜ್ಮೆಂಟ್ ಇವರನ್ನು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಕ್ವಾಲಿಟಿ ಹೆಡ್ ಆಗಿ ನೇಮಕ ಮಾಡಿದರು. ಬಿಡುವಿಲ್ಲದ ಕೆಲಸದ ಮಧ್ಯೆಯೂ ಇನ್ನೂ ಅನುಭವ ಬೇಕು ಎಂಬ ತುಡಿತ ಇದ್ದೇ ಇತ್ತು. 2008 ರಲ್ಲಿ ಜಗತ್ತಿನ ಅತಿದೊಡ್ಡ ಸಿಮೆಂಟ್ ಕಂಪನಿ ಲಫಾರ್ಜ ಕಂಪನಿಗೆ ಸೆಲೆಕ್ಟ್ ಆದರು.ಈ ಪ್ರಾನ್ಸ್ ಕಂಪನಿಯಲ್ಲಿ ಏಶಿಯಾ ಫೆಸಿಪಿಕ್ ರೀಜನಲ್ ಕ್ವಾಲಿಟಿ ಎಂಡ್ ಪ್ರೊಡೆಕ್ಟ್ ಡೆವಲಪ್ಮೆಂಟ್ ಹೆಡ್ ಆಗಿ ಮಲೇಶಿಯಾ (ಕೌಲಾಲಂಪುರ್)ದಲ್ಲಿ ಕೆಲಸ.ಅಲ್ಲಿರುವಾಗ ಇಂಡೋನೇಶಿಯಾ, ಕೋರಿಯಾ, ಜಪಾನ್, ಚೀನಾ ಹೀಗೆ ಎಲ್ಲ ದೇಶಗಳ ಸಿಮೆಂಟ್ ಪ್ಲಾಂಟಿನ ಅಭಿವೃದ್ಧಿ ಗೆ ಕಾರಣರಾದರು.
2011ರಲ್ಲಿ ರಿಲಯನ್ಸ ಸಿಮೆಂಟಿನ ವೈಸ್ ಪ್ರೆಸಿಡೆಂಟ್ ಆಗಿ ಮುಂಬೈದಲ್ಲಿ ಸೇವೆಸಲ್ಲಿಸಿದರು. ಪ್ರಸ್ತುತ ರಾಜಸ್ಥಾನದ ಜನಪ್ರಿಯ ಸಿಮೆಂಟ್ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿಲ್ಲದ ಕೆಲಸದ ಮಧ್ಯೆ 112 ರಿಸರ್ಚ್ ಪೇಪರ್ಸ, ಮತ್ತೂ 6 ಪೇಟೆಂಟ್ ಇವು ಮೊದಲಿನಿಂದಲೂ ಇವರಿಂದ ಕೈ ಗೂಡಿ ಬಂದ ಸಾಧನೆಗಳು.
2019ರಲ್ಲಿ ಜಾಗತಿಕ ಮಟ್ಟದ ಸಿಮೆಂಟ್ ಮ್ಯಾಗಝಿನ್ ಗಳಾದ ವರ್ಲ್ಡ್ ಸಿಮೆಂಟ್, ಇಂಟರ್ ನ್ಯಾಷನಲ್ ಸಿಮೆಂಟ್ ರಿವ್ಹ್ಯೂ, ZKG ಇಂಟರ್ ನ್ಯಾಷನಲ್ ಸಿಮೆಂಟ್ ಮತ್ತು ಕಾಂಕ್ರೀಟ್ ರಿಸರ್ಚ್ ಜರ್ನಲ್ ಇವುಗಳಲ್ಲಿ ಏಕಕಾಲದಲ್ಲಿ ಡೊಮೆನ್(Domain) ಎಕ್ಸಪರ್ಟ ಆಗಿ ಆಯ್ಕೆ ಆದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರ ನಿರಂತರ ಕೊಡುಗೆ ಹಾಗೂ ಸಾಧನೆಗೆ ವಿಝನ್ ವರ್ಲ್ಡ್(VISION WORLD) ಹಾಗೂ ಗುಜರಾತ್ ಚೇಂಬರ್ ಆಪ್ ಕಾಮರ್ಸ್ ಇಂಡಸ್ಟ್ರಿ( Gujarat chamber of comments and Industry) ಯವರು “ಗ್ಲೋಬಲ್ ವಿಝನರಿ ಅವಾರ್ಡ್” “( GLOBAL VISIONARY AWARD)”ಕೊಟ್ಟು ಸನ್ಮಾನಿಸಿದ್ದಾರೆ.
ಇಂತಹ ಪ್ರಶಸ್ತಿ ಕರ್ನಾಟಕ ದವರಿಗೆ ಎಂಬ ಹೆಮ್ಮೆ,ಅದರಲ್ಲೂ .ಸಿರ್ಸಿ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಕನ್ನಡ ಮಾಧ್ಯಮ ದಲ್ಲಿ ಓದಿ ಈ ಮಟ್ಟಕ್ಕೆ ಏರುವುದು ಮಹಾಸಾಧನೆಯೇ ಸರಿ.ಇಂತಹ ಸಾಧನೆ ಮಾಡುವಾಗ ಬಹಳ ವಿಘ್ನಗಳು, ಎಡರು ತೊಡರುಗಳು ಬಂದಿರುತ್ತದೆ. ಆದರೆ ಸಮಾಧಾನ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ, ಸಾಧಿಸ ಬೇಕೆನ್ನುವ ಛಲ ಇದ್ದರೆ ಏನನ್ನಾದರೂ ಸಾಧಿಸ ಬಹುದೆನ್ನುವದಕ್ಕೆ ಡಾ||. ಸುಬ್ರಾಯ ಹೆಗಡೆಯವರು ಯುವಜನರಿಗೆ ಒಂದು ಪ್ರೇರಣೆ ಆಗುವುದರಲ್ಲಿ ಸಂದೇಹವಿಲ್ಲ. ಭಗವಂತನು ಅವರಿಗೆ ಆಯು-ಆರೋಗ್ಯ ಕೊಟ್ಟು ಕಾಪಾಡಲಿ.ಇನ್ನೂ ಉತ್ತಂಗಕ್ಕೇರಲೆಂದು ಹಾರೈಸೋಣ.
ಶ್ರೀಮತಿ ಹೆಗಡೆ
ಮುಂಡಿಗೇಸರ (ಬೆಂಗಳೂರು)