ಕುಮಟಾ : ತಾಲೂಕಿನ ವನ್ನಳ್ಳಿಯಲ್ಲಿ ಗದ್ದೆ ಉಳುಮೆ ಮಾಡುವ ಸಂದರ್ಭದಲ್ಲಿ ಮಷಿನಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಕುಮಟಾ ತಾಲೂಕಿನ ವನಳ್ಳಿಯಲ್ಲಿ ತನ್ನ ಸಂಭಂದಿಕರ ಮನೆಗೆ ಗದ್ದೆ ಉಳುಮೆಗೆ ಬಂದಾಗ ಆಯತಪ್ಪಿ ಮಷಿನಿಗೆ ಸಿಲುಕಿದ್ದು, ತೀವೃ ರಕ್ತಸ್ರಾವದಿಂದ ಆಸ್ಪತ್ರೆ ಸಾಗಿಸುವ ಸಂಧರ್ಭದಲ್ಲಿ ಪ್ರಾಣ ಬಿಟ್ಟಿರುವುದಾಗಿ ತಿಳಿದುಬಂದಿದೆ.
ಮಂಜುನಾಥ ಹನುಮಂತ ನಾಯ್ಕ (42) ಮೃತ ವ್ಯಕ್ತಿಯಾಗಿದ್ದು, ಕಡ್ಲೆ ನಿವಾಸಿ ಎಂದು ತಿಳಿದುಬಂದಿದೆ.