ಕಾರವಾರ : ಉತ್ತರ ಕನ್ನಡದಲ್ಲಿ ಕೊರೋನಾ ಹಾವು-ಏಣಿ ಆಟ ಮುಂದುವರಿದಿದೆ. ಇಂದು ಒಟ್ಟು 33 ಕೊರೋನಾ ಪ್ರಕರಣಗಳು ದಾಖಲಾಗಿದ್ದು 35 ಜನರು ಇಂದು ಕೊರೋನಾ ಗೆದ್ದು ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.
ಕಾರವಾರ 04, ಅಂಕೋಲಾ 4, ಕುಮಟಾ 3, ಹೊನ್ನಾವರ 1,ಭಟ್ಕಳ 0, ಶಿರಸಿ 1, ಸಿದ್ದಾಪುರ 2, ಯಲ್ಲಾಪುರ 3, ಮುಂಡಗೋಡ 10, ಹಳಿಯಾಳ 5, ಜೋಯ್ಡಾ 0 ಪ್ರಕರಣ ಅಂದರೆ ಒಟ್ಟೂ 33 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 136 ಆಕ್ಟೀವ್ ಪ್ರಕರಣಗಳಿವೆ.
ಕಾರವಾರ 3, ಅಂಕೋಲಾ 2, ಕುಮಟಾ 2, ಹೊನ್ನಾವರ 11 , ಭಟ್ಕಳ 0, ಶಿರಸಿ 9, ಸಿದ್ದಾಪುರ 0, ಯಲ್ಲಾಪುರ 5, ಮುಂಡಗೋಡ 0, ಹಳಿಯಾಳ 3, ಜೋಯ್ಡಾ 0 ಜನರು ಒಟ್ಟೂ 35 ಜನ ಕೊರೋನಾ ಗೆದ್ದು ಮನೆಗೆ ಮಾಪಸ್ಸಾಗಿದ್ದಾರೆ.
ಒಟ್ಟು 13382 ಜನರು ಕೊರೋನಾ ಗೆದ್ದು ಬಂದರೆ, 13749 ಜನ ಕೊರೋನಾ ಕಹಿ ಅನುಭವಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಕುಮಟಾದಲ್ಲಿ ಓರ್ವನು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 178 ಏರಿಕೆಯಾಗಿದೆ.