ಕಾರವಾರ : ನಗರದ ದೈವಜ್ಞ ಭವನದಲ್ಲಿ ಭಾರತೀಯ ಜನತಾ ಪಕ್ಷದ ಕಾರವಾರ ನಗರ ಮಂಡಲದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.

ಪ್ರಶಿಕ್ಷಣ ವರ್ಗ ಎಂಬುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಇಲ್ಲಿ ಕಲಿಯುವ ವಿಷಯಗಳು ಪದಾಧಿಕಾರಿ ಹಾಗೂ ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತದೆ. ಅಭ್ಯಾಸ ವರ್ಗವು ಶಾಲೆ ಇದ್ದಂತೆ, ಇಲ್ಲಿ ಕಲಿಯುವ ವಿಷಯಗಳನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ತರಗತಿಗಳಿಗೆ ಯಾರೂ ಗೈರು ಹಾಜರಾಗದೇ ಲಾಭ ಪಡೆದುಕೊಳ್ಳಬೇಕು. ಅಭ್ಯಾಸ ವರ್ಗವೂ ಶಿಕ್ಷಣಾರ್ಥಿಗಳಲ್ಲಿ ಆತ್ಮವಿಶ್ವಾಸ, ಲವಲವಿಕೆ, ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ. ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ನೆನಪಿನಲ್ಲಿ ಹಾಗೂ ಬರೆದು ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

RELATED ARTICLES  ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ, ಉಪಾಧ್ಯಕ್ಷರಾದ ನಾಗರಾಜ ನಾಯಕ, ನಯನಾ ನೀಲಾವರ, ನಗರ ಮಂಡಲ ಅಧ್ಯಕ್ಷರಾದ ನಾಗೇಶ್ ಕುರ್ಡೆಕರ, ಜಿಲ್ಲಾ ಪ್ರಭಾರಿಯಾದ ಆರತಿ ಗೌಡ, ಪ್ರಶೀಕ್ಷಣ ವರ್ಗದ ಜಿಲ್ಲಾ ಸಂಚಾಲಕರಾದ ಈಶ್ವರ ದೊಡ್ಡಮನಿ, ರಾಜ್ಯ ಮೀನುಗಾರ ಪ್ರಕೋಷ್ಟಕದ ಸಹ ಸಂಚಾಲಕರಾದ ಗಣಪತಿ ಉಳ್ವೇಕರ, ಮಾಜಿ ಶಾಸಕರಾದ ಗಂಗಾಧರ ಭಟ್ಟ, ನಗರ ಮಂಡಲದ ವಿವಿಧ ಮೊರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ಕುಮಟಾದಲ್ಲಿ ಭೀಕರ ಅಪಘಾತ : ಇಬ್ಬರ ಸಾವು.