ಕಾರವಾರ : 2ನೇ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆಯಾದ ಶ್ರೀ ಎಸ್.ವಿ.ಸಂಕನೂರ ಅವರ ಕೃತಜ್ಞತಾ ಸಮಾರಂಭ ಕಾರ್ಯಕ್ರಮವು ಕಾರವಾರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಿತು.

ವ್ಯಕ್ತಿಯ ವ್ಯಕ್ತಿತ್ವವವೇ ಆತನ ನಿಲುವುಗಳನ್ನು ಹೇಳುತ್ತದೆ. ಅಂತಹ ವ್ಯಕ್ತಿತ್ವವನ್ನು ಶ್ರೀ ಸಂಕನೂರು ಅವರು ಹೊಂದಿದ್ದಾರೆ. ಶಿಕ್ಷಕರ ಹಾಗೂ ಪದವೀಧರರ ಅನುಕೂಲವಾಗುವಂತೆ ವಿಧಾನ ಪರಿಷತ್ ಸದಸ್ಯರೊಂದಿಗೆ ನಾನೂ ಶ್ರಮಿಸುತ್ತೇನೆ. ಎಲ್ಲ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರ ಮಕ್ಕಳು ಇಂದು ಕಷ್ಟ ಅನುಭವಿಸುತ್ತಿದ್ದಾರೆ. ಅವರ ಕಷ್ಟ ನಿವಾರಣೆಗೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯ ತಿಳಿಸಿದರು.

RELATED ARTICLES  ಕುಮಟಾದಲ್ಲಿ ಇಂದಿನಿಂದ ಹಾಫ್ ಡೇ ಲಾಕ್ ಡೌನ್ ಇಲ್ಲ : ಪೂರ್ತಿದಿನ ಅಂಗಡಿ ಮುಂಗಟ್ಟು ತೆರಯಲು ಅವಕಾಶ

ಶ್ರೀ ಎಸ್.ವಿ.ಸಂಕನೂರ ಅವರು ಮಾತನಾಡಿ, ಗೆಲುವಿನ ಪ್ರತಿ ಹೆಜ್ಜೆಯಲ್ಲೂ ಶ್ರಮಿಸಿದ ಶಿಕ್ಷಕರು, ಪದವೀಧರರು ಹಾಗೂ ಭಾರತೀಯ ಜನತಾ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೆನೆ. ಶಿಕ್ಷಣ ಇಲಾಖೆ ಹೊರತು ಪಡಿಸಿ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪದವೀಧರರು ನನಗೆ ಮತ ನೀಡಿದ್ದು, ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.

ಎರಡನೇ ಅವಧಿಗೆ ಆಯ್ಕೆಯಾಗಿದ್ದು, ಎರಡು ಪಟ್ಟು ಜವಾಬ್ದಾರಿ ಇವೆ. ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಸರ್ಕಾರ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಆರಂಭಿಸಿದ್ದು, ಅದರಲ್ಲಿರುವ ಸಾಧಕ ಬಾದಕಗಳನ್ನು ಪರಿಶೀಲಿಸುವಂತೆ ಶಿಕ್ಷಣ ಸಚಿವರಾದ ಶ್ರೀ ಸುರೇಶ್‌ಕುಮಾರ ಅವರಿಗೆ ದೂರವಾಣಿ ಮೂಲಕ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು.

RELATED ARTICLES  ಹಸಿರು ಮೇವಿನ ಕೊರತೆ ನೀಗಿಸಲು ಪ್ರಯೋಗಕ್ಕೆ ಕೈಹಾಕಿದೆ ಕೃಷಿ ವಿಜ್ಞಾನ ಕೇಂದ್ರ

ಈ ಸಂದರ್ಭದಲ್ಲಿ ರಾಜ್ಯ ಮೀನುಗಾರ ಪ್ರಕೋಷ್ಟಕದ ಸಹ ಸಂಚಾಲಕರಾದ ಶ್ರೀ‌ ಗಣಪತಿ ಉಳ್ವೇಕರ, ಪ್ರಾಚಾರ್ಯರಾದ ರಮೇಶ್ ಪತ್ರೇಕರ, ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.