ಹೊನ್ನಾವರ : ತಾಲೂಕಿನ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ, ಹಳದೀಪುರ ಬಗ್ರಾಣಿಯ ವಿನಾಯಕ ಶ್ರೀಧರ ಶೇಟ ನಿನ್ನೆ ಸಂಜೆ ಶಿರಸಿಯಲ್ಲಿರುವ ತಮ್ಮ ಮಾವನ ಮನೆಯಿಂದ ತುರ್ತು ಕೆಲಸದ ನಿಮಿತ್ತ ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ, ರಸ್ತೆಯ ತಿರುವಿನಲ್ಲಿ ವಾಹನವೊಂದು ಇವರ ಬೈಕ್ ಗೆ ಅಪ್ಪಳಿಸಿದ್ದರಿಂದ ವಿನಾಯಕ ತೀವ್ರ ತಲೆಯ ಗಾಯಕ್ಕೆ ಒಳಗಾಗಿದ್ದರು.

RELATED ARTICLES  ಕದ್ದ ಗೋವುಗಳನ್ನು ರಕ್ಷಿಸಿದ ಪೋಲೀಸರು : ಹೊನ್ನಾವರದ ಮಂಕಿ ಸಮೀಪ ಘಟನೆ

ತಕ್ಷಣ ಅವರನ್ನು ಹುಬ್ಬಳ್ಳಿಯ ಕೆ.ಎಂ.ಸಿ.ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ 4 ಗಂಟೆ ವೇಳೆ ಅವರು ಕೊನೆಯುಸಿರೆಳೆದ ಬಗ್ಗೆ ವರದಿಯಾಗಿದೆ.

ಹಳದೀಪುರ ಗ್ರಾಮ ಪಂಚಾಯತ್ ಮತ್ತು ವಿ.ಎಸ್.ಎಸ್. ಬ್ಯಾಂಕುಗಳಲ್ಲಿ ಸೋಲಿಲ್ಲದ ಸರದಾರನಂತೆ ಆಯ್ಕೆಯಾಗುತ್ತಿದ್ದುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

RELATED ARTICLES  ಬಸ್ ನಿಲ್ದಾಣದಲ್ಲಿ ನವಜಾತ ಶಿಶುವನ್ನು ಬಿಟ್ಟುಹೋದ ತಾಯಿ ಪತ್ತೆ..!