ಕುಮಟಾ : ಶಿರಸಿಯಲ್ಲಿ ನಡೆದ ಅಪಘಾತದಲ್ಲಿ ನಿಧನರಾದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು, ಹಳದೀಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ ಆದ ಶ್ರೀ ವಿನಾಯಕ ಶೇಟ್ ಅವರಿಗೆ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ರತ್ನಾಕರ ನಾಯ್ಕ, ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ಸುರೇಖಾ ವಾರೇಕರ್, ಮುಜಾಫರ್ ಸಾಬ್, ಕೃಷ್ಣಾನಂದ ವೆರ್ಣೇಕರ್, ಮಹೇಶ್ ನಾಯ್ಕ, ರಾಘವೇಂದ್ರ ಪಟಗಾರ, ಸುಮಿತ್ರಾ ನಾಯ್ಕ,ಹನೀಫ್ ಸಾಬ್, ಜಯಂತ ನಾಯ್ಕ, ಬೀರಣ್ಣ ನಾಯಕ, ಜಗದೀಶ್ ಹರಿಕಂತ್ರ, ಆನಂದು ನಾಯಕ, ಅನಿಲ್ ಮಡಿವಾಳ, ಮಹಾಬಲೇಶ್ವರ ಗೌಡ, ಮೈಕೆಲ್ ಫರ್ನಾಂಡಿಸ್, ರಮೇಶ್ ನಾಯ್ಕ, ಶಿವಾನಂದ ಪಟಗಾರ,. ಮಂಜುಳಾ ಅಂಬಿಗ, ಸಚಿನ್ ನಾಯ್ಕ, ಆನಂದು ಗೌಡ,ದಯಾನಂದ ನಾಯ್ಕ,ನಾಗರಾಜ್ ನಾಯ್ಕ, ಎಂ.ಬಿ.ಖಾನ್, ನಿತ್ಯಾನಂದ ನಾಯ್ಕ, ಅಕ್ಬರ್ ಬುಡನ್ ಸಾಬ್, ಡಿ‌.ಕೆ.ಕೋಡ್ಕಣಿ, ಜಯರಾಮ ನಾಯ್ಕ, ದೀಪಕ ಭಟ್, ಗೋಪಾಲ ನಾಯ್ಕ, ಶಾಂತಾರಾಮ ನಾಯ್ಕ, ರಾಜು ಅಂಬಿಗ ಮಂಜುನಾಥ್ ಹರಿಕಂತ್ರ, ವಿನಾಯಕ ನಾಯ್ಕ, ಶಂಭು ನಾಯ್ಕ, ಗಜಾನನ ನಾಯ್ಕ, ಬೀರಾ ಗೌಡ, ಮೋಹನ್ ಪಟಗಾರ, ಸುಧಾಕರ ನಾಯ್ಕ, ಸಂತೋಷ ನಾಯ್ಕ, ವಿಜಯ್ ವೆರ್ಣೇಕರ್ ಮುಂತಾದವರು ಹಾಜರಿದ್ದರು.

RELATED ARTICLES  ಭಾವಿಕೇರಿ ಬೆಳ್ಳಿಹಬ್ಬದ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

ಬ್ಲಾಕ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಮಾತನಾಡಿ, ” ನಾವು ಒಬ್ಬ ಪ್ರಾಮಾಣಿಕ , ನಿಷ್ಠಾವಂತ ವ್ಯಕ್ತಿ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡುಕೊಂಡಿದ್ದೇವೆ. ಇದು ಪಕ್ಷಕ್ಕೆ ಹಾಗೂ ವಯಕ್ತಿಕವಾಗಿ ತುಂಬಲಾರದ ನಷ್ಟವಾಗಿದೆ.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದರು. ಮಾಜಿ ಶಾಸಕಿಯರ ಆದಿಯಾಗಿ ಎಲ್ಲರೂ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಆಯ್ಕೆ ಉದಯ, ಶೋಭಾ, ಷರೀಫ್, ದತ್ತಗುರು ಅವರಿಗೆ ಯುವ ಕೃತಿ ಪುರಸ್ಕಾರ