ಕಾರವಾರ : ಮಹಾರಾಷ್ಟ್ರ ಕ್ಯಾತೆ ತೆಗೆದು ಆಗಾಗ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದಿದ್ದು ಒಂದೆಡೆಯಾದರೆ, ಬಿಎಸ್‌ಎನ್‌ಎಲ್ ಹೀಗೊಂದು ಎಡವಟ್ಟು ಮೆಸೇಜ್ ಕಳಿಸಿ ಕಾರವಾರದ ನಿವಾಸಿಗಳು ತಬ್ಬಿಬ್ಬಾಗುವಂತೆ ಮಾಡಿದೆ.
ಕಾರವಾರದ ವಿವಿಧೆಡೆ ಸಂಚರಿಸಿದ ಬಿಎಸ್‌ಎನ್‌ಎಲ್ ಗ್ರಾಹಕರ ಮೊಬೈಲ್ ಗೆ “ವೆಲ್‌ಕಮ್ ಟು ಮಹಾರಾಷ್ಟ್ರ ಬಿಎಸ್‌ಎನ್‌ಎಲ್ ನೆಟ್ವರ್ಕ್” ಎಂದು ಮೆಸೇಜ್ ಬಂದಿದ್ದು ಜನರನ್ನು ದಿಕ್ಕೆಡಿಸಿತ್ತು.
ಮೆಸೇಜ್ ನೋಡಿದ ಹಲವರು ಕಾರವಾರವನ್ನು ಮಹಾರಾಷ್ಟ್ರ ಕ್ಕೆ ಸೇರಿಸಿದರಾ ಎಂದು ಪ್ರಶ್ನಿಸತೊಡಗಿದ್ದರು. ಜಿಲ್ಲೆಯ ಹಲವು ತಾಲೂಕಿನ ಜನರೂ ಹಿಗೆಯೇ ಪ್ರಶ್ನಿಸತೊಡಗಿದ್ದರು.
ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಾಲ್ಲೂಕಿನ ಅಸ್ನೋಟಿ, ಮಾಜಾಳಿ ಹಾಗೂ ನಗರದಲ್ಲಿ ನೆಟ್ವರ್ಕ್‌ಗಳನ್ನ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗಿದ್ದು ಈ ವೇಳೆ ತಾಂತ್ರಿಕ ತೊಂದರೆಯಿಂದ ಈ ರೀತಿ ಸಂದೇಶ ಬಂದಿರುವ ಸಾಧ್ಯತೆಗಳಿವೆ ಎಂದಿದ್ದಾರೆ.