ಕುಮಟಾ : ತಾಲೂಕಿನ ಬಡಗಣಿಯ ಗೋ ಗ್ರೀನ್ ಹೊಂ ಸ್ಟೇ ನ ಮೈದಾನದಲ್ಲಿ ಇಂದು ಭಾರತೀಯ ಜನತಾ ಪಕ್ಷವು ಆಯೋಜಿಸಿದ್ದ ” ಗ್ರಾಮ ಸ್ವರಾಜ್ಯ ಸಮಾವೇಶ ” ವನ್ನು ಮಾನ್ಯ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಹಾಗೂ ಸಚಿವರಾದ ಜಗದೀಶ ಶೆಟ್ಟರ್ ಮತ್ತು ರಾಜ್ಯ ಹಾಗೂ ಜಿಲ್ಲೆಯ ನಾಯಕರೊಂದಿಗೆ ದೀಪವನ್ನು ಬೆಳಗಿಸುವುದರ ಮೂಲಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾಧ್ಯಕ್ಷ ರಾದ ವೆಂಕಟೇಶ ನಾಯಕ ರವರು ಪ್ರಾಸ್ತಾವಿಕ ಮಾತನಾಡಿ ಗ್ರಾಮ ಪಂಚಾಯಿತಿ ಚುನಾವಣೆ ಯ ಪೂರ್ವಭಾವಿ ಯಾಗಿ ಈ ಸಮಾವೇಶ ಹಮ್ಮಿಕೊಂಡಿದ್ದು ನಮ್ಮ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದು ಸರ್ಕಾರ ದ ಸಾಧನೆಯನ್ನು ಕಾರ್ಯಕರ್ತರಿಗೆ ಹಾಗೂ ಜನರಿಗೆ ತಿಳಿಸುವ ಹಾಗೂ ಕಾರ್ಯಕರ್ತರಿಗೆ ಶಕ್ತಿ ತುಂಬುಲು ನಾಲ್ಕು ತಂಡ ರಚಿಸಿದ್ದು ನಾಲ್ಕನೇ ತಂಡ ನಮ್ಮ ಜಗದೀಶ ಶೆಟ್ಟರ್ ತಂಡ ಶಿರಸಿ ಹಾಗೂ ಕರಾವಳಿ ಭಾಗದಲ್ಲಿ ಇನ್ನಷ್ಟು ಗಟ್ಟಿ ಮಾಡಲು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಬಂದಿದ್ದಾರೆ.. ಈ ಬಾರಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಜನರೂ ಕೂಡ ಈ ಬಾರಿಯೂ ಬಿಜೆಪಿ ಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಸಮಾವೇಶದಲ್ಲಿ ಮಾತನಾಡಿದ ಸಚಿವರಾದ ಶಿವರಾಮ ಹೆಬ್ಬಾರ್ ಅವರು ನಮ್ಮ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ನಮ್ಮ ಗೆಲುವಿಗಾಗಿ ಶ್ರಮಿಸುವ ಕಾರ್ಯಕರ್ತರು ಸ್ಪರ್ಧಿಸುವ ಚುನಾವಣೆ ಗ್ರಾಮಪಂಚಾಯತ ಚುನಾವಣೆ.. ನಾವೆಲ್ಲರೂ ಕಾರ್ಯಕರ್ತರ ಗೆಲುವಿಗೆ ಶ್ರಮಿಸಬೇಕು ನನಗೆ ವಿಶ್ವಾಸವಿದೆ ಈ ಬಾರಿ ಜಿಲ್ಲೆಯ ಎಲ್ಲ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯಿತಿ ಯಲ್ಲಿ ನಮ್ಮ ಕಾರ್ಯಕರ್ತರು ಗೆಲುವು ಸಾಧಿಸಿ ಹೆಚ್ಚಿನ ಗ್ರಾಮ ಪಂಚಾಯಿತಿ ನಮ್ಮದಾಗಲಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಶಾಸಕರು ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು ಅವರ ಜೊತೆ ನಿಂತು ಅವರ ಗೆಲುವಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಶಾಸಕರರಾದ ದಿನಕರ ಶೆಟ್ಟಿ ಮಾತನಾಡಿ ಗ್ರಾ.ಪಂ ಗಳಲ್ಲಿ ಮೀಸಲಾತಿಯ ಸಮಸ್ಯೆ, ಈ ಸ್ವತ್ತು ಹಾಗೂ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ನಡುವೆ ನಡೆವ ತಾರತಮ್ಯದ ಬಗ್ಗೆ ತಿಳಿಸಿದರು.
ಈ ಸಮಾವೇಶದಲ್ಲಿ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ , ಶ್ರೀ ಸಿ.ಸಿ ಪಾಟೀಲ್, ಶಾಸಕರಾದ ದಿನಕರ ಶೆಟ್ಟಿ, ಸುನಿಲ್ ನಾಯ್ಕ, ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ್ ಸಿದ್ದಿ , ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಡಾ. ಸಂದೀಪ ಕುಮಾರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ,ರಾಜ್ಯ ಕೋರ್ ಕಮಿಟಿ ಸದಸ್ಯರು, ಜಿಲ್ಲೆಯ ಮುಖಂಡರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.