“ರಾಜ್ಯದಲ್ಲಿ ಕಠಿಣವಾದ ಗೋಹತ್ಯೆ ನಿಷೇಧದ ಕಾನೂನು ಜಾರಿಗೆ ತರಬೇಕು. ಪ್ರಸ್ತಕ ಚಳಿಗಾಲದ ಅಧಿವೇಶನದಲ್ಲೇ ಗೋಹತ್ಯೆ ನಿಷೇಧದ ಮಸೂದೆ ಮಂಡನೆಯಾಗಬೇಕು ಹಾಗೂ ನೀವುಗಳು ಈ ಕುರಿತು ದನಿ ಎತ್ತುವ ಮೂಲಕ ಮಸೂದೆ ವಿಧಾನಸಭೆಯಲ್ಲಿ ಅನುಮೋದನೆಯಾಗಿ ಕಾನೂನು ಅನುಷ್ಠಾನಕ್ಕೆ ಬರುವಂತಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆಯಾದ ಭಾರತೀಯ ಗೋಪರಿವಾರ ಟ್ರಸ್ಟ್ ವತಿಯಿಂದ ಇಂದು ನಗರಕ್ಕೆ ಆಗಮಿಸಿದ್ದ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್, ಗಣಿ & ಭೂವಿಜ್ಞಾನ ಇಲಾಖೆ ಸಚಿವರಾದ ಶ್ರೀ ಸಿ. ಸಿ. ಪಾಟೀಲ್ ಹಾಗೂ ಕಾರ್ಮಿಕ & ಸಕ್ಕರೆ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ಅವರಿಗೆ ಆಗ್ರಹ ಮಾಡಲಾಯಿತು.

ಶ್ರೀರಾಮಚಂದ್ರಾಪುರ ಮಠದ ಗೋಪರಿವಾರ ಸಂಘಟನೆಯು ಕೆಲವು ವರ್ಷಗಳಿಂದ ಗೋ ರಕ್ಷಣೆಗಾಗಿ, ಗೋಹತ್ಯೆ ನಿಷೇಧದ ಕಾನೂನು ಜಾರಿಗಾಗಿ ಒತ್ತಾಯಿಸುತ್ತಲೇ ಬಂದಿದೆ‌.
ಇದಕ್ಕೆ ಪೂರವಾಗಿ ದೇಶದಾದ್ಯಂತ ಗೋಮಹತ್ವದ ಕುರಿತು ಜಾಗೃತಿ ಮೂಡಿಸಿದ ಗೋಯಾತ್ರೆಗಳು, ವಿವಿಧ ಅಭಿಯಾನಗಳನ್ನು ಹಮ್ಮಿಕೊಳ್ಳುತಾ ಬಂದಿದೆ.
‘ಅಭಯಾಕ್ಷರ’ ಎಂಬ ನಮ್ಮೆಲ್ಲರ ಹಸ್ತಾಕ್ಷರದ ಮೂಲಕ‌ ಗೋವಿಗೆ ಅಭಯ ಕೊಡುವ ಬೃಹತ್ ಆಂದೋಲನವನ್ನು ಯಶಸ್ವಿಯಾಗಿ ಮಾಡಿದೆ. ಈ ಅಭಿಯಾನದ ಮೂಲಕ ಒಂದು ಕೋಟಿಗೂ ಅಧಿಕ ಜನರು ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಆಯಾ ಜಿಲ್ಲಾಧಿಕಾರಿಗಳ ಮೂಲಕ ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಸ್ವಹಸ್ತಾಕ್ಷರದ ಮೂಲಕ ಆಗ್ರಹಿಸಿದ್ದಾರೆ. ಇದರಲ್ಲಿ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಗಳು, ಪರಮಪೂಜ್ಯ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರು, ಈಗಿನ ಮುಖ್ಯಮಂತ್ರಿಗಳಾದ ಶ್ರೀ. ಬಿ. ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕಾನೇಕ ಗಣ್ಯಮಾನ್ಯರ ಅಭಯಾಕ್ಷರ ಸೇರಿದೆ.

RELATED ARTICLES  ಇಂದಿನ (ದಿ-22/10/2018) ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ರಾಘವೇಶ್ವರ ಭಾರತಿ ಶ್ರೀಗಳಿಂದ ರಕ್ತಾಕ್ಷರದ ಆಗ್ರಹ:
ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು ತಮ್ಮ ರಕ್ತದಲ್ಲಿ ಗೋಹತ್ಯೆ ನಿಷೇಧದ ಆಗ್ರಹವನ್ನು ಬರೆದಿರುವುದು ಗಮನಾರ್ಹ. ಶ್ರೀ ರಾಘವೇಶ್ವರಭಾರತಿ ಶ್ರೀಗಳವರ ಜೊತೆ ನಾಡಿನ ಅನೇಕ ಸಂತರು, ಗಣ್ಯ ಮಾನ್ಯರು, ಗೋಪ್ರೇಮಿಗಳು ಹೀಗೆ ಸುಮಾರು 1500ಕ್ಕೂ ಅಧಿಕ ವ್ಯಕ್ತಿಗಳು ರಕ್ತಾಕ್ಷರ ಸಮರ್ಪಿಸಿದ್ದಾರೆ.

RELATED ARTICLES  ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಉದ್ಘಾಟನೆ

ಅಭಯಾಕ್ಷರ ಅಭಿಯಾನದ ಮುಂದುವರಿದ ಭಾಗವಾಗಿ ರಾಜ್ಯ ಸರ್ಕಾರದ ಎಲ್ಲ ಸಚಿವರನ್ನು ಖುದ್ದು ಭೇಟಿಯಾಗಿ ‘ಮುಂಬರುವ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವಂತೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಿದ್ದು, ಅದರಂತೆ ಭಾರತೀಯ ಗೋಪರಿವಾರ ಟ್ರಸ್ಟ್ ಕಾರ್ಯದರ್ಶಿ ಮಧುಗೋಮತಿ, ಶ್ರೀರಾಮಚಂದ್ರಾಪುರ ಮಠದ ಗಣ್ಯಸಂಪರ್ಕ ವಿಭಾಗದ ಶ್ರೀಸಂಯೋಜಕ ಶ್ರೀ ಶಿಶಿರ್ ಹೆಗಡೆ, ಯಲ್ಲಾಪುರದ ಹಂಡ್ರಮನೆ ಗೋಪಾಲಕೃಷ್ಣ ಭಟ್ ಹಾಗೂ ಶಿರಸಿ ತಾಲೂಕು ಗೋಪರಿವಾರದ ಪದಾಧಿಕಾರಿಗಳಾದ ಶ್ರೀ ಆರ್.ಜಿ. ನಾಯಕ್, ಶ್ರೀ ಸಿ.ಎಸ್.‌ಹೆಗಡೆ, ಶ್ರೀ ಡಿ.ಎಸ್. ಹೆಗಡೆ, ಶ್ರೀ ರವಿ ಗೌಳಿ ಇವರುಗಳು ಇಂದು ಶಿರಸಿ ನಗರಕ್ಕೆ ಆಗಮಿಸಿದ್ದ ಮಾನ್ಯ ಸಚಿವರುಗಳನ್ನು ಆಗ್ರಹಿಸಿದರು‌.