ಅಂಕೋಲಾ: ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬಸ್ ಗುದ್ದಿ ಭೀಕರ ಅಪಘಾತವಾದ ಘಟನೆ ಶನಿವಾರ ಮುಂಜಾನೆ ಸಮಯದಲ್ಲಿ ನಡೆದಿದೆ.
ಆನಂದ ಟ್ರಾವೆಲ್ಸ್ ಬಸ್ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಐದು ಜನ ಗಂಭಿರ ಗಾಯವಾಗಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಬೇಕಿದ್ದು ಗಾಯಗೊಂಡವರಿಗೆ ಅಂಕೋಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಬೆಂಗಳೂರಿನಿಂದ ಗೋವಾಕ್ಕೆ 30 ಜನ ಪ್ರಯಾಣಿಕರನ್ನು ಕರೆದೊಯ್ಯುತಿತ್ತು.ಚಾಲಕನ ಆಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣವಾಗಿದ್ದು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.