ಕಾರವಾರ: ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೀನು ತರಲು ತೆರಳಿದ್ದ ವೇಳೆ ಬುಲೆಟ್‌ಗೆ ಏಕಾಏಕಿ ಬೆಂಕಿ ಹೊತ್ತುಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಕಾರವಾರದಿಂದ ವರದಿಯಾಗಿದೆ.
ಕಾರವಾರದ ಮಾಜಾಳಿಯ ಗಾಂವಗೇರಿಯಲ್ಲಿ ಈ ಘಟನೆ ನೆಡೆದಿದ್ದು, ಬೈಕಿನ ಬಹುತೇಕ ಭಾಗಗಳು ಸುಟ್ಟು ಕರಕಲಾಗಿದೆ. ಕಾರವಾರದ ನಂದನ್ ರಮಾಕಾಂತ್ ನಾಯ್ಕ ಎನ್ನುವವರಿಗೆ ಸೇರಿದ ಬೈಕ್ ಇದು ಎನ್ನಲಾಗಿದೆ. ಚಿತ್ತಾಕುಲ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿ ಪೆಟ್ರೋಲ್ ಫುಲ್ ಇದ್ದ ಕಾರಣ, ಬೆಂಕಿ ಕೆನ್ನಾಲಿಗೆ ಚಾಚಿದ್ದು, ಬಹುತೇಕ ಬೈಕಿನ ಭಾಗಗಳು ಸುಟ್ಟು ಭಸ್ಮವಾಗಿದೆ.
ಬೈಕ್‌ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎನ್ನುವುದು ಇನ್ನೂ ನಿಗೂಢವಾಗಿದೆ. ಕಿಡಿಗೇಡಿಗಳ ಕೃತ್ಯವೇ ಅಥವಾ ತಾಂತ್ರಿಕದೋಷದಿoದ ಬೆಂಕಿ ಕಾಣಿಸಿಕೊಂಡಿತೇ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.