ಹೊನ್ನಾವರ :ಚಂದಾವರ ಸೀಮೆಯ ಶ್ರೀ ಹನುಂತ ದೇವರ ಕಾರ್ತಿಕ ದೀಪೋತ್ಸವ ಇದೇ ಡಿಸೆಂಬರ್ 14 ರಂದು ನಡೆಯಲಿದೆ. ಆದರೆ, ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ದೀಪೋತ್ಸವನ್ನು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಬಾರಿ ದೀಪೋತ್ಸವದಂದು ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ. ಪಲ್ಲಕ್ಕಿಯನ್ನು ನಾಕಾಕ್ಕೆ ಒಯ್ಯುವುದನ್ನು ರದ್ದು ಮಾಡಲಾಗಿದೆ. ಜೊತೆಗೆ ದೇವಾಲಯದ ಆವರಣದಲ್ಲಿ ಪಟಾಕಿ ಸಿಡಿಸುವುದು ನಿರ್ಭಂದಿಸಲಾಗಿದ್ದು, ಕೋವಿಡ್ ನಿಯಮಾವಳಿ ಪಾಲನೆ ಕಡ್ಡಾಯ ಎಂದು ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.