ಯಲ್ಲಾಪುರ : ತಾಲೂಕಿನ ಮಂಚಿಕೇರಿ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ರಾಜಸ್ಥಾನ ಮೂಲದ ರತನ್ ಲಾಲ್ ರಾಮಚಂದ್ರ ಶರ್ಮ (46) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಡಿ.ವೈ.ಎಸ್.ಪಿ ರವಿ ಡಿ ನಾಯ್ಕ್ ಹಾಗೂ ಯಲ್ಲಾಪುರ ಸಿ.ಪಿ.ಐ ಸುರೇಶ್ ಯಳ್ಳೂರ್ ನೇತೃತ್ವದಲ್ಲಿ ಯಲ್ಲಾಪುರ ಮತ್ತು ಶಿರಸಿ ಪೋಲಿಸರನ್ನೊಳಗೊಂಡ ತಂಡ ದಾಳಿ ನಡೆಸಿ 15,400 ಮೌಲ್ಯದ 744 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಹಾಗೂ ಹೀರೊ ಫ್ಯಾಷನ್ ಮೋಟಾರ್ ಬೈಕನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಯಲ್ಲಾಪುರ CPI ಸುರೇಶ್ ಯಳ್ಳೂರ್ ತನಿಖೆ ಕೈಗೊಂಡಿದ್ದಾರೆ. ಬಂಧನ ಕಾರ್ಯಾಚರಣೆಯಲ್ಲಿ ಯಲ್ಲಾಪುರ ಠಾಣೆಯ ASI ವಿಠಲ್ ಮಾಲವಾಡಕರ್, ಶಿರಸಿ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.