ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವೆಂಕ್ಟಾಪುರ ಕಂಡೆಕೊಡ್ಲದಲ್ಲಿ ಪದ್ಮಾವತಿ ಬಡಿಯಪ್ಪ ನಾಯ್ಕ ಎನ್ನುವವರಿಗೆ ಸೇರಿದ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಲಕ್ಷಾಂತರ ರೂ.ನಷ್ಟ ಸಂಭವಿಸಿದ ಘಟನ ನಡೆದಿದೆ. ಬೆಂಕಿಯ ತೀವ್ರತೆಗೆ ಮನೆಯ ಮೇಲ್ಛಾವಣಿ ಕೂಡಾ ಸುಟ್ಟು ಕರಕಲಾಗಿದ್ದು ಮನೆಯವರು ಸೂರು ಇಲ್ಲದಂತೆ ಆಗಿದ್ದಾರೆ.

RELATED ARTICLES  ಮುಂದಿನ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಬಾರದೆಂದು ಆಗ್ರಹ! ಕಾರವಾರದಲ್ಲಿ ದಲಿತ ಸಂಘಟನೆ ಮುಖಂಡರಿಂದ ಪತ್ರಿಕಾಗೋಷ್ಠಿ!

ವಿದ್ಯುತ್ ಶಾರ್ಟ್ ಸಕ್ರ‍್ಯೂಟ್ ಯಿಂದ ಮನೆಗೆ ಬೆಂಕಿ ತಾಗಿರಬಹುದು ಎಂದು ಶಂಕಿಸಲಾಗಿದೆ, ಒಟ್ಟೂ 2 ಲಕ್ಷದ 75 ಸಾವಿರ ರೂಪಾಯಿ ಹಾನಿ ಯಾದಬಗ್ಗೆ ವರದಿಯಾಗಿದೆ.

ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಪಾತ್ರೆ, ದಿನಸಿ ಸಾಮಾನುಗಳು, ಇಲೆಕ್ಟ್ರಾನಿಕ್ ವಸ್ತುಗಳ ಜೊತೆಯಲ್ಲಿ ಮನೆಯಲ್ಲಿದ್ದ ಬಟ್ಟೆ ಬರೆಗಳು,ಚಿನ್ನದ ಸರ್,ಕಿವಿ ಓಲೆ,ನಗದು 25 ಸಾವಿರ ಹಣ ಸೇರಿದಂತೆ ದಿನಬಳಕೆ ವಸ್ತುಗಳೂ ಸುಟ್ಟು ಕರಕಲಾಗಿದೆ.

RELATED ARTICLES  ಕುಮಟಾದಲ್ಲಿ ಅನಂತ ಕುಮಾರ ಹೆಗಡೆ ಪತ್ರಿಕಾಗೋಷ್ಠಿ : ನೆರೆ ಪರಿಹಾರದ ಬಗ್ಗೆ ವಿವರಣೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದು, ಸ್ಥಳಕ್ಕೆ ಜಾಲಿ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವು, ಗ್ರಾಮ ಸಹಾಯಕರಾದ ಮಾಸ್ತಯ್ಯ ನಾಯ್ಕ,ವಾಸು ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.