ಕುಮಟಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕುಮಟಾ ತಾಲೂಕಿನ ದೇವಗಿರಿ ವಲಯದ ದೇವಗುಂಡಿ, ಹೊಳೆಗದ್ದೆ, ಅಳ್ವೇಕೋಡಿ ಗ್ರಾಮಗಳಲ್ಲಿ ಆಯ್ದ ನಿರ್ಗತಿಕ ಕುಟುಂಬಗಳಿಗೆ ಮಾಶಾಸನ ನೀಡುವುದರೊಂದಿಗೆ ವಾತ್ಸಲ್ಯಕಿಟ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಡಿ ಈ ಕುಟುಂಬಕ್ಕೆ ಬಟ್ಟೆ, ದಿಂಬು, ಚಾಪೆ, ಬೆಡ್ ಶೀಟ್, ಮುಂತಾದ ದಿನಬಳಕೆಗೆ ಅಗತ್ಯವಾದ ಸಾಮಗ್ರಿಗಳ ವಿತರಣೆ ಮಾಡಲಾಯಿತು. 1) ದೇವಗುಂಡಿ ನಿವಾಸಿ ಕಾಮಾಕ್ಷಿ ಪಟಗಾರ, 2)ಹೊಳೆಗದ್ದೆ ಸುಬ್ಬಿ ಮಾಸ್ತಿ ಮುಕ್ರಿ, 3)ಅಳ್ವೇಕೋಡಿ ಮಾಲತಿ ಗಾವಡಿ ಹಾಗೂ ತಾಲೂಕಿನ 19 ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮ ನಡೆಯಿತು.

RELATED ARTICLES  ಕುಮಟಾದಲ್ಲಿ ವ್ಯಾಪಾರಸ್ಥರಿಂದ ವ್ಯಕ್ತಿ ಮೇಲೆ ಹಲ್ಲೆ

ಈ ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ವಕೀಲರಾದ ಆರ್.ಜಿ ನಾಯ್ಕ, ಗ್ರಾಮಾಭಿವೃದ್ದಿ ಯೋಜನೆಯ ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರಾದ ಶಂಕರ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ದಯಾನಂದ ದೇಶಭಂಡಾರಿ, ಯೋಜನಾಧಿಕಾರಿಗಳಾದ ನಾಗರಾಜ ನಾಯ್ಕ, ಗಣ್ಯರಾದ ಸುರೇಶ ನಾಯ್ಕ, ವಿಪತ್ತು ನಿರ್ವಹಣೆ ಸಂಯೋಜಕರಾದ ಮಾದೇವ ಪಟಗಾರ, ತಿಮ್ಮಪ್ಪ ಪಟಗಾರ, ಮೇಲ್ವಿಚಾರಕರಾದ ಯದುನಂದ ನಾಯ್ಕ, ಒಕ್ಕೂಟದ ಅಧ್ಯಕ್ಷರಾದ ಕವಿತಾ ನಾಯ್ಕ, ಪದಾದಿಕಾರಿಗಳಾದ ಕಲ್ಪನಾ, ರೂಪ, ಪ್ರೇಮಾಬಾಯಿ, ಸೇವಾಪ್ರತಿನಿಧಿಗಳಾದ ಸುರಕ್ಷಾ, ಗೀತಾ, ಸ್ಪಂದನ ಹಾಜರಿದ್ದರು.

RELATED ARTICLES  ಶ್ರಾವಣಮಾಸದಲ್ಲಿ ಧಾರೇಶ್ವರದ ಶ್ರೀಧಾರಾನಾಥ ದೇವಸ್ಥಾನದಲ್ಲಿ ಈ ನಿಯಮ