ಕಾರವಾರ : ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಮತದಾದರರಿಗೆ ಮದ್ಯದ ಆಮಿಷ ಒಡ್ಡುವ ಹಾಗೂ ಗೊವಾ ರಾಜ್ಯದಿಂದ ಅಗ್ಗದ ಮದ್ಯವನ್ನು ಸಾಗಾಣಿಕೆ ಮಾಡುವ ಸಾಧ್ಯತೆಗಳಿರುವ ಕಾರಣ ಅಬಕಾರಿ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಮದ್ಯ ವಿತರಕರು ಹಾಗೂ ಮಾರಟ ಮಾಡುವ ಸನ್ನದ್ಧುದಾರರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ ಕೆ. ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯ ಸಂಭಾಗಣದಲ್ಲಿ ಬುಧವಾರ ನಡೆದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮತದಾನ ಸಂದರ್ಭದಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಈಗಾಗಲೇ ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳು ತಮ್ಮ ಗಸ್ತು ಚಟುವಟಿಕೆಗಳನ್ನು ತಿವ್ರಗೊಳಿಸಬೇಕು. ಜೊತೆಗೆ ರಾತ್ರಿ ಗಸ್ತುಗಳನ್ನು ಇನ್ನು ಬೀಗಿಗೊಳಿಸಬೇಕು. ಗೊವಾ ರಾಜ್ಯದೊಂದಿಗೆ ಗಡಿ ಹೊಂದಿರುವ ಜಿಲ್ಲೆಯ ತಪಾಸಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಬೇಕು ಎಂದರು.

RELATED ARTICLES  ಪೊಲೀಸ್ ತಂಡದೊಂದಿಗೆ ಸಿಆರ್‌ಪಿಎಫ್ ಯೋಧರ ಪಥ ಸಂಚಲನ.

ಜಿಲ್ಲೆಯಲ್ಲಿ ಅಬಕಾರಿ ಸನ್ನದ್ಧು ಹೊಂದಿರುವ ಅಂಗಡಿಗಳ ಮಾಲಿಕರಿಗೆ ತಾವು ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯುವ ಮತ್ತು ಮುಚ್ಚುವ ಕಾರ್ಯ ನಿರ್ವಹಿಸಬೇಕೆಂಬ ಸೂಚನೆ ನೀಡಬೇಕು. ಇದನ್ನು ಉಲ್ಲಂಘಿಸುವ ಸನ್ನದ್ಧುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಪಾಲನೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದಲ್ಲದೇ ಸನ್ನದ್ಧುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದಂರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಅಬಕಾರಿ ಉಪ ಆಯುಕ್ತ ಶಿವನಗೌಡ, ಅಬಕಾರಿ ಉಪ ಅಧೀಕ್ಷಕ ಸಂತೋಷ ಸೇರಿದಂತೆ ಜಿಲ್ಲೆಯ ಎಲ್ಲಾ ಅಬಕಾರಿ ಅಧಿಕಾರಿಗಳು ಹಾಜರಿದ್ದರು.

RELATED ARTICLES  ಭಗವದ್ಗೀತೆಯನ್ನು ಅವಹೇಳನ ಮಾಡಿದರಾ ಶಿಕ್ಷಕಿ? ಶಿರಸಿಯಲ್ಲಿ ಸುದ್ದಿಯಲ್ಲಿದೆ ಧರ್ಮ ನಿಂದನೆ ವಿಷಯ