ಕುಮಟಾ : ಈ ತಿಂಗಳ ೨೨ ರಂದು ಮಂಗಳವಾರ ಜರುಗಲಿರುವ ಗ್ರಾಮಪಂಚಾಯತ ಚುನಾವಣೆಗೆ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ಲೋಕೇಶ್ವರ ಹಿಣಿ ವಾರ್ಡನ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ ಕಿರಿಯ ವಯಸ್ಸಿನ ಸ್ನಾತಕೋತ್ತರ ಪದವೀಧರೆ ಕುಮಾರಿ ನಿಧಿ ಉಮೇಶ ದೇಶಭಂಡಾರಿ ಇವಳು ತಾನು ಬಯಸಿದ ಚುನಾವಣಾ ಚಿನ್ಹೆ ಅನಿಲ ಸಿಲೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ತೀವ್ರ ಕುತೂಹಲ ಕೆರಳಿಸಿರುವ ಇವಳ ಸ್ಪರ್ಧೆಯು ಈಗಾಗಲೇ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.ರಾಜಕೀಯ ಅನನುಭವಿಯಾದ ಈಕೆ ಸಧ್ಯದ ಪರಿಸ್ಥಿತಿಯಲ್ಲಿ ಗೆಲುವಿಗೆ ಪೂರಕವಾದ ಹೆಚ್ಚಿನ ಅಂಶಗಳನ್ನು ಹೊಂದಿರದಿದ್ದರೂ ಸಂಪಾದಿಸಿದ ವಿದ್ಯೆ ಹಾಗೂ ತನ್ನ ದಿವಂಗತ ತಂದೆಯವರಾದ ಉಮೇಶ ದೇಶಭಂಡಾರಿ ಇವರು ಗಳಿಸಿರುವ ಜನಪ್ರಿಯತೆನ್ನೇ ನೆಚ್ಚಿಕೊಳ್ಳಬೇಕಾಗಿದೆ ಘಟಾನುಘಟಿ ಎದುರಾಳಿಯ ಎದುರು ನಿಧಿಯ ಸೆಣೆಸಾಟದಲ್ಲಿ ಆಕೆಗೆ ದೊರೆತಿರುವ ಚುನಾವಣೆ ಚಿನ್ಹೆಯಾದ ಸಿಲಿಂಡರ್ ವರವಾಗಲಿದೆ ಎಂದೇ ಅಂದಾಜಿಸಲಾಗಿದೆ.
ಕೇಂದ್ರಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಜ್ವಲ ಅನಿಲ ಯೋಜನೆಯಡಿ ಲೋಕೇಶ್ವರ ಕಾಗಾಲದಲ್ಲಿ ಅತೀ ಹೆಚ್ಚಿನ ಫಲಾನುಭವಿಗಳಿಗೆ ಉಚಿತ ಸಿಲೆಂಡರ ಒದಗಿಸಿ ಜನಪ್ರಿಯರಾದ ಇವರ ಪುತ್ರಿ ಸಿಲೆಂಡರ ಚಿನ್ಹೆಯೊಂದಿಗೆ ಮನೆಮನೆಗೆ ತೆರಳಿ ಮತಯಾಚಿಸುವಾಗ ತಂದೆಯನ್ನೇ ನೆನಪಿಸಲಿದ್ದಾಳೆ.
ಚುನಾವಣಾ ಕಣ ದಿನದಿಂದ ದಿನಕ್ಕೆ ರೋಚಕ ಘಟ್ಟವನ್ನು ತಲುಪುತ್ತಿದೆ.