ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು , ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 14-12 -2020 ಸೋಮವಾರ ಕಾರ್ತೀಕ ಅಮಾವಾಸ್ಯೆಯಂದು ಶಾರ್ವರಿ ಸಂವತ್ಸರದ ರಂಗಪೂಜೆ (ಎಡೆ ಅಮಾವಾಸ್ಯೆ) ಉತ್ಸವ, ರಥೋತ್ಸವ ಸಂಪನ್ನಗೊಂಡಿತು . ಅರ್ಚಕರಾದ ವೇ.ಮೂ. ಸಾಂಬ ಬಟ್ ಷಡಕ್ಷರಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .
ಉಪಾಧಿವಂತ ಮಂಡಳದ ಸದಸ್ಯರು ಹಾಗೂ ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು . ಶ್ರೀದೇವರಿಗೆ 108 ಎಡೆ ವಿಶೇಷ ಭಕ್ಷ್ಯ ನೈವೇದ್ಯ ಸಲ್ಲಿಸಲಾಯಿತು. ಪೂಜೆಯ ನಂತರ ಶ್ರೀ ದೇವಾಲಯದಲ್ಲಿ ಸೇವೆ ಸಲ್ಲಿಸುವ ವಿವಿಧ ಸಮಾಜದ ಕಾರ್ಯಕರ್ತರಿಗೆ ಎಡೆ ಪ್ರಸಾದವನ್ನು ವಿತರಿಸಲಾಯಿತು.