ಭಟ್ಕಳ: ಗಣಪತಿಯ ವಿಸರ್ಜನೆಯ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಇಂದು ನಡೆದಿದೆ.

ಮುರ್ಡೇಶ್ವರದ ಓಲಗ ಮಂಟಪದ ಸಮೀಪದಲ್ಲಿರುವ ಕೆರೆಯಲ್ಲಿ ಈ ಘಟನೆ ನಡದಿದೆ. ಸುಬ್ರಾಯ ಮಾಸ್ತಪ್ಪ ನಾಯ್ಕ (೩೫) ಮೃತ ದುರ್ದೈವಿ.
ಈತ ಬೆದ್ರಮನೆ ಭಾಗದ ನಿವಾಸಿ.
ಓಲಗಮಂಟಪದಿಂದ  ಬಿದ್ರಳ್ಳಿವರೆಗೆ  ಮೆರವಣಿಗೆ ನಡೆಸಿ, ಮೂರ್ತಿ ವಿಸರ್ಜನೆಗೂ ಮುನ್ನಾ ಕೆರೆಗೆ ಇಳಿದಿದ್ದ ಯುವಕರಲ್ಲಿ ಆಯತಪ್ಪಿ ಬಿದ್ದು ಈತ ಮೃತಪಟ್ಟಿದ್ದಾನೆ.
ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಎಲ್ಲರ ಮನಗೆದ್ದ ಕೃಷ್ಣ ಗೌಡರ ಪೆನ್ಸಿಲ್ ಆರ್ಟ