ಭಟ್ಕಳ: ಶೋಟೋಕಾನ್ ಇನ್ ಸ್ಟಿಟ್ಯೂಟ್ ನ ಹನುಮಾನನಗರದ ಶಾಖೆಯ ಕರಾಟೆ ತರಬೇತುದಾರ ಸಂತೋಷ್ ಆಚಾರ್ಯ ಅವರಿಂದ ತರಬೇತಿ ಪಡೆದ ಮೂವರು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಗಂಗಾವತಿಯಲ್ಲಿ 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಆನ್ ಲೈನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಪಟ್ಟಣದ ಶೋಟೊಕಾನ್ ಕರಾಟೆ ಇನ್ ಸ್ಟಿಟ್ಯೂಟ್ ನ ಕತಾ ವಿಭಾಗದಲ್ಲಿ ಮಿನಾಲ್ ವಿ.ನಾಯ್ಕ ಪ್ರಥಮ, ರುಚಿತಾ ಪಿ.ಆಚಾರ್ಯ ಹಾಗೂ ಪ್ರಭಾಸ್ ಎ.ನಾಯ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರ ಸಂತೋಷ್ ಅವರಿಗೆ ಇನ್ ಸ್ಟಿಟ್ಯೂಟ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಪೋಷಕರು, ಜೈಹನುಮಾನ್ ಯುವಕ ಮಂಡಳದ ಪಧಾಧಿಕಾರಿಗಳು, ನಾಮಧಾರಿ ಸಮಾಜದ ಅಧ್ಯಕ್ಷರು, ಹನುಮಾನನಗರದ ಊರಿನ ಮುಖಂಡರು ಅಭಿನಂದಿಸಿದ್ದಾರೆ.