ಕುಮಟಾ : ತಾಲೂಕಿನ ಮಿರ್ಜಾನ ನಾಗೂರು ಸಂತೆಗದ್ದೆ ಬಳಿ ಬೈಕ್ ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋರಿಕ್ಷದಲ್ಲಿದ್ದ ಆರು ವರ್ಷದ ಪುಟ್ಟ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಾಲೂಕಿನ ಸಂತೆಗದ್ದೆ ನಿವಾಸಿ ತನ್ಮಯ್ ಸದಾನಂದ ಮಡಿವಾಳ ಮೃತಪಟ್ಟ ಬಾಲಕ. ಈತನು ತನ್ನ ತಂದೆ ಸದಾನಂದ ಶಂಕರ ಮಡಿವಾಳ ಜೊತೆ ಹೊಸ ಆಟೋರಿಕ್ಷಾದಲ್ಲಿ ಮಿರ್ಜಾನ ಕಡೆಯಿಂದ ಸಂತೆಗದ್ದೆ ತೆರಳುತ್ತಿರುವಾಗ ಎದುರಿನಿಂದ ಅತೀ ವೇಗವಾಗಿ ಬಂದ ಪ್ಲಸರ್ ಬೈಕ್ ಡಿಕ್ಕಿ ಹೊಡೆದಿದೆ.

RELATED ARTICLES  ಕುಮಟಾ ತಾಪಂನಲ್ಲಿ ಮಹಿಳಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಸಾಮಾಜಿಕ ಪರಿಶೋಧನೆ ತರಬೇತಿ

ಅಪಘಾತದ ಆಟೋರಿಕ್ಷಾದ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಬಾಲಕ ತನ್ಮಯ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಲ್ಲದೇ ಈ ಅಪಘಾತದಲ್ಲಿ ಬೈಕ್ ಸವಾರ ಕೃಷ್ಣ ಮಡಿವಾಳ ಹಾಗೂ ಆಟೋರಿಕ್ಷಾ ಚಾಲಕ ಸದಾನಂದ ಮಡಿವಾಳ ಇವರಿಬ್ಬರೂ ಕೂಡ ಗಂಭೀರ ಗಾಯಗೊಂಡಿದ್ದು, ಇವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯ "ಉತ್ತಮ ಪ್ರಾಯೋಗಿಕ ಶಾಲೆ" ಯಾಗಿ ಹೊರಹೊಮ್ಮಿದ ಹೊಲನಗದ್ದೆ ಶಾಲೆ.