ಕುಮಟಾ: ಕಳೆದ ಕೆಲದಿನಗಳ ನಂತರ ಇಂದು ಮತ್ತೆ ಕಳ್ಳತನ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಕುಮಟಾ ತಾಲೂಕಿನ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನ ಕಾರ್ಯಾಲಯಕ್ಕೂ ಸಹ ಕಳ್ಳರು ಪಕ್ಕಾ ಪ್ಲ್ಯಾನಿಂಗ್ ಮಾಡಿ ಕನ್ನಹಾಕಿರುವ ಘಟನೆ ಇದೀಗ ಭಾರೀ ಚರ್ಚಿತವಾಗುತ್ತಿದೆ.

ಕುಮಟಾ ತಾಲೂಕಿನ ಹೊಸ ಬಸ್ ಸ್ಟ್ಯಾಂಡ್ ಸಮೀಪವಿರುವ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ಕಾರ್ಯಾಲಯಕ್ಕೆ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮರಾವನ್ನು ಗಮನಿಸಿರುವ ಕತರ್ನಾಕ್ ಕಳ್ಳರು ಹಣದ ಜೋತೆಗೆ ಸಿ.ಸಿ ಕ್ಯಾಮರಾದ ದೃಷ್ಯಾವಳಿಗಳನ್ನು ಸಂಗ್ರಹಿಸಿಕೊಳ್ಳುವ ಡಿ.ವಿ.ಆರ್ ಅನ್ನು ಸಹ ಕದ್ದೊಯ್ದಿದ್ದಾರೆ. ಸುಮಾರು 1 ಲಕ್ಷ 50 ಸಾವಿರಕ್ಕೂ ಅಧಿಕ ನಗದನ್ನು ದೋಚಿಕೊಂಡು ಹೊಗಿದ್ದಾರೆ.

RELATED ARTICLES  ಟಿ.ಎಸ್.ಎಸ್ ನಲ್ಲಿ ಅಡಿಕೆಯ ನೇರ ಖರೀದಿ ಪ್ರಾರಂಭ

ಕದೀಮರು ಬುಧವಾರ ರಾತ್ರಿಯ ವೇಳೆ ಈ ಕೃತ್ಯ ಎಸಗಿದ್ದು, ಎಂದಿನoತೆ ಕಾರ್ಯಾಲಕ್ಕೆ ಬಂದ ಸಿಬ್ಬಂದಿಗಳಿಗೆ ಗುರುವಾರ ಮುಂಜಾನೆ ಶಾಕ್ ಕಾದಿತ್ತು. ಪ್ರತಿ ನಿತ್ಯದಂತೆ ತಮ್ಮ ಕಾರ್ಯದ ನಿಮಿತ್ತ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಬರುವಷ್ಠರಲ್ಲಿ ಕಾರ್ಯಾಲಯದ ಬಾಗಿಲು ಮುರಿದಿತ್ತು ಹಾಗೂ ಲಾಕರ್‌ನಲ್ಲಿದ್ದಂತಹ ನಗದು ಮಾಯವಾಗಿತ್ತು.

RELATED ARTICLES  ಕಚ್ಚಿದ ಹಾವನ್ನೇ ಹೊತ್ತುಕೊಂಡು ಆಸ್ಪತ್ರೆಗೆ ಬಂದ…!

ಘಟನೆಯ ಸಂಬಂಧ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಾಲಯಕ್ಕೆ ಕುಮಟಾ ಸಿ.ಪಿ.ಐ ಪರಮೇಶ್ವರ ಗುನಗಾ, ಕೈಂ ಪಿ.ಎಸ್.ಐ ಸುಧಾ ಅಘನಾಶಿನಿ ಬೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಬೆರಳಚ್ಚು ಸಂಗ್ರಹ ತಂಡ ಹಾಗೂ ಶ್ವಾನ ದಳವನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.