ಹೊನ್ನಾವರ : ಎಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯ ಕಾವು ಏರುತ್ತಿದೆ. ಒಂದೊಂದು ಗ್ರಾಮದಲ್ಲಿ ಒಂದೊಂದು ವಿಶೇಷತೆಗಳು ಕಾಣುತ್ತಿದೆ. ಪುರುಷ ಸ್ಪರ್ಧಿಗಳ ಜೊತೆಗೆ ಮಹಿಳಾ ಸ್ಪರ್ಧಿಗಳೂ ಕಣದಲ್ಲಿ ಬಿರುಸಿನ ಪ್ರಚಾರದ ಮೂಲಕ ಅಖಾಡಕ್ಕೆ ರಂಗು ತುಂಬಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ 2020 ರಲ್ಲಿ ಹೊನ್ನಾವರ ತಾಲೂಕಿನ ಕಡತೋಕಾದ ಕೆಕ್ಕಾರು – ಹೆಬ್ಳೆಕೇರಿ ವಾರ್ಡನಲ್ಲಿ ಸ್ಪರ್ಧಿಸಿರುವ ಸಾವಿತ್ರಿ ಶ್ರೀಕೃಷ್ಣ ಭಟ್ಟ ಕಂಚಿ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಇದೇ ಬರುವ ಮಂಗಳವಾರ ಅಂದರೆ ಡಿಸೆಂಬರ್ 22 ರಂದು ನಡೆಯುವ ಚುನಾವಣೆಯ ಗೆಲುವಿಗಾಗಿ ಮತ ಯಾಚನೆಯಲ್ಲಿ ನಿರತರಾಗಿರುವ ಇವರು ಗ್ರಾಮದ ಅಭಿವೃದ್ಧಿಯ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಆಶಯ ವ್ಯಕ್ತಪಡಿಸಿ ಹೊಸ ಕನಸು ಹಾಗೂ ಗ್ರಾಮದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಪದವೀಧರೆಯಾಗಿರಯವ ಸಾವಿತ್ರಿಯವರು ಪ್ರಸಿದ್ಧ ಹಾಗೂ ಸಮಾಜ ಸೇವೆ ಹಾಗೂ ಇತರ ಧಾರ್ಮಿಕ ಕೈಂಕರ್ಯಗಳ ಮೂಲಕ ಗ್ರಾಮದಲ್ಲಿ ಹೆಸರಾಗಿರುವ ಕಂಚಿ ಕುಟುಂಬದ ಸೊಸೆಯಾಗಿರುವುದೇ ಅವರ ಬಲ ಎನ್ನಬಹುದಾಗಿದೆ.
ಗ್ರಾಮ ಪಂಚಾಯತ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಯ ದಿಸೆಯಲ್ಲಿ ಹೊಸ ಮುಖ ತೋರುವ ಕನಸು ಕಂಡಿರುವ ಇವರ ಪ್ರಯತ್ನ ಯಶವಾಗಲೆಂದು ಸಾರ್ವಜನಿಕರು ಹಾರೈಸುತ್ತಿದ್ದಾರೆ.