ಕಾರವಾರ : ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ಜರುಗಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಡಿಸೆಂಬರ 22 ಹಾಗೂ 27 ರಂದು ಮತದಾನ ಜರುಗುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಡಾ. ಹರೀಶ ಕುಮಾರ ಕೆ. ಅವರು ಆದೇಶ ಹೊರಡಿಸಿದ್ದಾರೆ.

RELATED ARTICLES  ಮಹಾನಂದಿ ಗೋಲೋಕದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ ಯಶಸ್ವಿ

ಮೊದಲ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ ದಿನಾಂಕ 20-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 22-12-2020ರ ಸಾಯಂಕಾಲ 5 ಗಂಟೆವರೆಗೆ ಹಾಗೂ ಎರಡನೇ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ 25-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 27-12-2020ರ ಸಾಯಂಕಾಲ 5 ಗಂಟೆವರೆಗೆ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸಲಾಗಿದ್ದು, ಶುಷ್ಕ ದಿನಗಳೆಂದು ಘೋಷಿಸಲಾಗಿದೆ.
ಈ ಅವಧಿಯಲ್ಲಿ ಮದ್ಯದ ಅಂಗಡಿಗಳು, ಬಿಯರ್ ಬಾರ್‌ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

RELATED ARTICLES  ಗ್ರಾ.ಪಂನ ಎಲ್ಲ ಚಟುವಟಿಕೆಗಳನ್ನು ಬಹಿಷ್ಕರಿಸುವ ನಿರ್ಣಯ