ಕುಮಟಾ : ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಾ , ಯುವಕರಿಗೆ ಸದಾ ಪ್ರೋತ್ಸಾಹಿಸಿ ಹುರಿದುಂಬಿಸುವ, ಯುವ ಸಮುದಾಯದ ಮುಖಂಡ ಎಂದು ಬಿಂಬಿತವಾಗಿರುವ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಅಮೆಚೂರ್ ಕಬ್ಬಡಿ ಅಸೋಶಿಯೇಶನ್ ರಾಜ್ಯ ಉಪಾದ್ಯಕ್ಷರಾದ ಸೂರಜ್ ನಾಯ್ಕ ಸೋನಿ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗದವರು ಕುಮಟಾದ ಹೆರವಟ್ಟಾದ ವೃದ್ಧಾಶ್ರಮದಲ್ಲಿ ವೃದ್ಧರು ಹಾಗೂ ಅಶಕ್ತರಿಗೆ ಹಣ್ಣು ಹಂಪಲು ವಿತರಿಸುವುದವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ವಿಶೇಷ ಆಡಂಬರ ಗಳಿಲ್ಲದೆ ಸಮಾಜಸೇವೆಗೆ ತಮ್ಮನ ತೊಡಗಿಸಿಕೊಂಡಿರುವ ಜೆಡಿಎಸ್ ಮುಖಂಡರಾಗಿ, ಅನೇಕ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೂರಜ್ ನಾಯ್ಕ ರವರ ಹುಟ್ಟಿದ ಹಬ್ಬವನ್ನು ಅಶಕ್ತರು ಹಾಗೂ ವೃದ್ಧರಿಗೆ ಹಣ್ಣು-ಹಂಪಲು ನೀಡುವುದರ ಮೂಲಕ ಆಚರಿಸಿ ಆಯಸ್ಸು ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಲಾಯಿತು ಎಂದು ಅಭಿಮಾನಿ ಬಳಗ ಸದಸ್ಯರು ಮಾಹಿತಿ ನೀಡಿದರು.
ಕುಮಟಾದಲ್ಲಿರುವ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ನ ವೃದ್ಧಾಶ್ರಮದಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸೂರಜ್ ನಾಯ್ಕ ಅವರ ಪತ್ನಿ ವೀಣಾ ಸೂರಜ್ ನಾಯ್ಕ ಸೋನಿಯವರು, ವೃದ್ಧಾಶ್ರಮದ ಪ್ರಮುಖರಾದ ಮೀರಾ ಶಾನಭಾಗ ಜೆ.ಡಿ.ಎಸ್ ಪ್ರಮುಖರಾದ ಭಾಸ್ಕರ ಪಟಗಾರ, ಇನ್ನಿತರ ಅಭಿಮಾನಿಗಳು ಹಾಜರಿದ್ದರು.