ಕುಮಟಾ : ಕುಮಟಾದ ದೀವಗಿ ಸಮೀಪ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಈಗ ವರದಿಯಾಗಿದೆ.

ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಈ ಕಾರಣದಿಂದ ಆತ ಮೃತಪಟ್ಟಿರುವುದಾಗಿ ಸ್ಥಳಿಯರು ಮಾಹಿತಿ ನೀಡಿದ್ದಾರೆ.

RELATED ARTICLES  ನಿಮ್ಮೊಳಗಿನ ಶಕ್ತಿ ನೀವು ನಂಬಿ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಐಐಟಿ ದೆಹಲಿ ಪ್ರಧ್ಯಾಪಕ ಕಿರಣ ಸೇಠ್ ರಿಂದ ಮಕ್ಕಳಿಗೆ ಕಿವಿಮಾತು.

ಕುಮಟಾ ತಾಲ್ಲೂಕಿನ ದೀವಗಿ ಸಮೀಪ ಗೋಕರ್ಣದಿಂದ ಬರುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬೈಕ್ ಗೆ ಲಾರಿ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಬೈಕ್ ಜೊತೆಗೆ ಡಿವೈಡರ್ ಗೆ ತಾಗಿ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಗೋಕರ್ಣದ ನಿವಾಸಿ ಮಧುಕೇಶ್ವರ ಶಾಂತಾರಾಮ ಸೂರಿ ಎಂದು ಗುರುತಿಸಲಾಗಿದೆ. ಕುಮಟಾದ ಕಾರ್ಯಕ್ಕಾಗಿ ಬರುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ರಾಜ್ಯ ರಾಜಕಾರಣದಲ್ಲಿ ತಲ್ಲಣ..!! ರಾಜಿನಾಮೆಗೆ ಮುಂದಾದ ಶಾಸಕರು? ಉರುಳುತ್ತಾ ಸರಕಾರ?

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮುಂದಿನ‌ಪ್ರಕ್ರಿಯೆ ಕೈಗೊಂಡಿದ್ದಾರೆ. ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿದ್ದು ಪೊಲೀಸರು ಕೂಡಲೇ ಕ್ರಮ ವಹಿಸಿದ್ದಾರೆ.